HomeKarnataka10 ಲಕ್ಷ ಕುಕ್ಕರ್ ಗೆ ಆರ್ಡರ್ ಮಾಡಿದ್ದಾರೆ, ಈಗಾಗಲೇ 4-5 ಲಕ್ಷ ಕುಕ್ಕರ್ ಹಂಚಿದ್ದಾರೆ: ನಿಖಿಲ್...

10 ಲಕ್ಷ ಕುಕ್ಕರ್ ಗೆ ಆರ್ಡರ್ ಮಾಡಿದ್ದಾರೆ, ಈಗಾಗಲೇ 4-5 ಲಕ್ಷ ಕುಕ್ಕರ್ ಹಂಚಿದ್ದಾರೆ: ನಿಖಿಲ್ ಕುಮಾರಸ್ವಾಮಿ

ರಾಮನಗರ: ಕಳೆದ 20 ದಿನಗಳಲ್ಲಿ ಸುಮಾರು 10 ಲಕ್ಷ ಕುಕ್ಕರ್ ಆರ್ಡರ್ ಮಾಡಿದ್ದಾರೆ. ಈಗಾಗಲೇ 4-5 ಲಕ್ಷ ಕುಕ್ಕರ್ ಗಳನ್ನು ಯಶಸ್ವಿಯಾಗಿ ಹಂಚಿಕೆ ಮಾಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ವಿರುದ್ಧ ಆರೋಪ ಮಾಡಿದ ನಿಖಿಲ್ ಕುಮಾರಸ್ವಾಮಿ, ಮೊನ್ನೆ ಸೀರೆ, ತವಾಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕಾಂಗ್ರೆಸ್ ನವರು ಮತದಾರರಿಗೆ ಆಮಿಷವೊಡ್ಡಿ ಚುನಾವಣೆ ನಡೆಸುತ್ತಿದ್ದಾರೆ. ಪ್ರಜ್ಞಾವಂತ ಮತದಾರರು ಯೋಚನೆ ಮಾಡಿ ಆಮಿಷಕ್ಕೆ ಬಲಿಯಾಗಬೇಡಿ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೆಡಿಎಸ್ ಕಾರ್ಯಕರ್ತರು ಯಾರೂ ವೀಕ್ ಮೈಂಡ್ ನವರು ಅಲ್ಲ. ಒಂದಷ್ಟು ಜನ ಸವಲತ್ತು ಪಡೆದು ಜೆಡಿಎಸ್  ನಿಂದ ದೂರವಾಗಿರಬಹುದು. ಆದರೆ, ನಮ್ಮ ಪಕ್ಷದ ನಿಷ್ಠಾವಂತರು ಎಂದಿಗೂ ಪಕ್ಷ ಬಿಡಲ್ಲ, ಆಮಿಷಕ್ಕೆ ಒಳಗಾಗುವುದೂ ಇಲ್ಲ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular