HomeKarnatakaBREAKING: ತಡರಾತ್ರಿ 12.50ರವರೆಗೆ ಸುವರ್ಣಸೌಧದಲ್ಲಿ ಕಲಾಪ, ಸುದೀರ್ಘ 14 ಗಂಟೆ ಚರ್ಚೆ ದಾಖಲೆ

BREAKING: ತಡರಾತ್ರಿ 12.50ರವರೆಗೆ ಸುವರ್ಣಸೌಧದಲ್ಲಿ ಕಲಾಪ, ಸುದೀರ್ಘ 14 ಗಂಟೆ ಚರ್ಚೆ ದಾಖಲೆ

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಮಧ್ಯರಾತ್ರಿ 12:50 ರವರೆಗೆ ಕಲಾಪ ನಡೆಸಲಾಗಿದೆ. ಬೆಳಗ್ಗೆ 10.30 ಕ್ಕೆ ಆರಂಭವಾದ ಕಲಾಪ ತಡರಾತ್ರಿವರೆಗೂ ನಡೆಸಿದ್ದು, ಒಟ್ಟು 14 ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ.

ಬೆಳಗಾವಿಯಲ್ಲಿ 10 ದಿನಗಳ ಕಾಲ ಅಧಿವೇಶನ ನಿಗದಿಯಾಗಿದ್ದು, ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ 9 ದಿನಕ್ಕೆ ಮೊಟಕುಗೊಂಡಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ಮಂಗಳವಾರ ಸಂತಾಪ ಸೂಚನೆಗೆ ಸೀಮಿತವಾಗಿತ್ತು. ಬುಧವಾರ ಸರ್ಕಾರಿ ರಜೆ ಘೋಷಣೆಯ ಕಾರಣ ಕಲಾಪ ನಡೆಯಲಿಲ್ಲ. ಹೀಗಾಗಿ ಅಧಿವೇಶನ 8 ದಿನಕ್ಕೆ ಇಳಿಕೆಯಾಗಿದ್ದು, ವಿಧಾನಸಭೆಯ ಕಲಾಪ ಪೂರ್ಣಗೊಳಿಸಲು ಕಳೆದ ಗುರುವಾರ ರಾತ್ರಿ 10:15 ರವರೆಗೆ ಕಲಾಪ ನಡೆಸಲಾಗಿತ್ತು.

ಸೋಮವಾರ ಮಧ್ಯರಾತ್ರಿ 12:30ವರೆಗೂ ಕಲಾಪ ನಡೆಸಲಾಗಿದೆ. ಮಧ್ಯಾಹ್ನ ಭೋಜನ ವಿರಾಮ ಮತ್ತು ಸಂಜೆ ಕಲಾಪದಲ್ಲಿ ಗಲಾಟೆಯಾದ ನಂತರದಿಂದ 30 ನಿಮಿಷ ಕಲಾಪ ಮುಂದೂಡಿದ್ದನ್ನು ಬಿಟ್ಟರೆ ಒಟ್ಟು 12 ಗಂಟೆವರೆಗೆ ಕಲಾಪ ನಡೆಸಲಾಗಿದೆ. ಈ ಮೂಲಕ ವಿಧಾನಸಭೆ ಕಲಾಪವನ್ನು ಒಂದು ದಿನದಲ್ಲಿ 14 ಗಂಟೆಗೂ ಹೆಚ್ಚು ಕಾಲ ನಡೆಸುವ ಮೂಲಕ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ದಾಖಲೆ ನಿರ್ಮಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular