HomeInternationalನೈಜೀರಿಯಾದಲ್ಲಿ ಘೋರ ದುರಂತ : ತೈಲ ಟ್ಯಾಂಕರ್ ಸ್ಪೋಟಗೊಂಡು 20 ಮಂದಿ ಸಜೀವ ದಹನ

ನೈಜೀರಿಯಾದಲ್ಲಿ ಘೋರ ದುರಂತ : ತೈಲ ಟ್ಯಾಂಕರ್ ಸ್ಪೋಟಗೊಂಡು 20 ಮಂದಿ ಸಜೀವ ದಹನ

ನೈಜೀರಿಯಾ : ನೈಜೀರಿಯಾದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ತೈಲ ಟ್ಯಾಂಕರ್ ಸ್ಪೋಟಗೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ 20 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ನೈಜೀರಿಯಾದ ದಕ್ಷಿಣ ಒಂಡೋ ರಾಜ್ಯದಲ್ಲಿ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ 20 ಜನರು ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ರಸ್ತೆ ಸುರಕ್ಷತಾ ಸಂಸ್ಥೆ ಸೋಮವಾರ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂಡೊದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ ಮುಖ್ಯಸ್ಥ ಯೆಹೆಜ್ಕೇಲ್ ಸೋನಾಲ್ಲಾ ಅವರ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಜಾರಿ ಒಂಡೋದ ಒಡಿಗ್ಬೊ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ. ಚಾಲಕ ಮತ್ತು ಅವರ ಸಹಾಯಕ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ತೈಲ ತೆಗೆದುಕೊಳ್ಳಲು ಜನರು ಟ್ಯಾಂಕರ್ ಸಮೀಪ ಹೋಗಿದ್ದ ವೇಳೆ ಸ್ಫೋಟಗೊಂಡಿದೆ ಎಂದು ತಿಳಿಸಿದ್ದಾರೆ.

ಸಾವನ್ನಪ್ಪಿದವರು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದಾರೆ ಮತ್ತು ಗುರುತಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular