HomeIndiaಪತ್ರಿಕೆಗಳು ಜೂನ್ 30 ರೊಳಗೆ ವಾರ್ಷಿಕ ವರದಿ ಸಲ್ಲಿಸದಿದ್ದರೆ 10 ಸಾವಿರ ರೂ. ದಂಡ

ಪತ್ರಿಕೆಗಳು ಜೂನ್ 30 ರೊಳಗೆ ವಾರ್ಷಿಕ ವರದಿ ಸಲ್ಲಿಸದಿದ್ದರೆ 10 ಸಾವಿರ ರೂ. ದಂಡ

ಭಾರತ ಸರ್ಕಾರದ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿಯು(ಮಾಹಿತಿ ಮತ್ತು ಪ್ರಸಾರ ಸಚಿವಾಲಯ) ದೇಶದ ಎಲ್ಲಾ ನೋಂದಾಯಿತ ನಿಯತಕಾಲಿಕೆಗಳ(ಪಿರಿಯಾಡಿಕಲ್ಸ್ -Periodicals) ಪ್ರಕಾಶಕರು 2024-25ರ ಆರ್ಥಿಕ ವರ್ಷದ ಆಡಿಟ್ ಮಾಡಲಾದ ವಾರ್ಷಿಕ ಹೇಳಿಕೆಯನ್ನು (ಎನ್‌ನುವಲ್ ಸ್ಟೇಟ್‌ಮೆಂಟ್ -Annual Statement) 2026 ನೇ ಜೂನ್ 30 ರ ಒಳಗಾಗಿ ಸಲ್ಲಿಸುವಂತೆ, ತಪ್ಪಿದಲ್ಲಿ ಭಾರಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ಸರ್ಕಾರ ಹೊರಡಿಸಿರುವ ‘ಸಲಹಾ ಸೂಚನೆ ಸಂಖ್ಯೆ 11 (ಅಡ್ವೈಜರಿ ನಂ. 11 ಆಫ್ 2026) (Advisory No. 11 of 2026)’ ರ ಪ್ರಕಾರ, ‘ಪ್ರೆಸ್ ಮತ್ತು ನಿಯತಕಾಲಿಕೆಗಳ ನೋಂದಣಿ (ಪಿ.ಆರ್.ಬಿ) (Pಖಃ) ಕಾಯ್ದೆ, 2023’ ರ ಸೆಕ್ಷನ್ 7 ರ ಅಡಿಯಲ್ಲಿ ಪ್ರತಿ ನೋಂದಾಯಿತ ನಿಯತಕಾಲಿಕೆಯು ನಿಗದಿತ ಅವಧಿಯೊಳಗೆ ತನ್ನ ವಾರ್ಷಿಕ ಹೇಳಿಕೆಯನ್ನು ‘ಪ್ರೆಸ್ ಸೇವಾ ಪೋರ್ಟಲ್ (Press Sewa Portal)’ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ. ಕಾಯ್ದೆಯ ಸೆಕ್ಷನ್ 14 ರ ಪ್ರಕಾರ, ಹಣಕಾಸು ವರ್ಷ ಮುಗಿದ ಒಂದು ವರ್ಷದೊಳಗೆ ವರದಿ ಸಲ್ಲಿಸಲು ವಿಫಲರಾಗುವ ಪ್ರಕಾಶಕರು ದಂಡನೆಗೆ ಗುರಿಯಾಗಲಿದ್ದಾರೆ.

ದಂಡದ ವಿವರಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲ ಬಾರಿಯ ಸುಸ್ತಿದಾರರಿಗೆ: ನಿಗದಿತ ದಿನಾಂಕದೊಳಗೆ ವರದಿ ಸಲ್ಲಿಸದಿದ್ದರೆ ಕನಿಷ್ಠ ರೂ. 10,000/- (ಹತ್ತು ಸಾವಿರ ರೂಪಾಯಿ) ದಂಡ ವಿಧಿಸಲಾಗುತ್ತದೆ.

ಮುಂದಿನ ಸರಣಿ ವೈಫಲ್ಯಗಳಿಗೆ: ಪ್ರತಿ ನಂತರದ ವರ್ಷದ ಸುಸ್ತಿಗೆ ದಂಡದ ಮೊತ್ತವು ದುಪ್ಪಟ್ಟಾಗುತ್ತಾ ಹೋಗುತ್ತದೆ (ಉದಾಹರಣೆಗೆ ಎರಡನೇ ಬಾರಿಗೆ ರೂ. 20,000/-).

ಗರಿಷ್ಠ ದಂಡದ ಮಿತಿ:

ಈ ದಂಡದ ಮೊತ್ತವು ಗರಿಷ್ಠ ರೂ. 2,00,000/- (ಎರಡು ಲಕ್ಷ ರೂಪಾಯಿ) ವರೆಗೆ ತಲುಪಬಹುದು.

ಕಾಲಾವಕಾಶ ವಿಸ್ತರಣೆ ಇಲ್ಲ:

ಸರ್ಕಾರವು ಜೂನ್ 30, 2026 ರ ಗಡುವಿನ ನಂತರ ಯಾವುದೇ ಕಾರಣಕ್ಕೂ ಕಾಲಾವಕಾಶವನ್ನು ವಿಸ್ತರಿಸುವುದಿಲ್ಲ ಎಂದು ತಿಳಿಸುತ್ತಾ, ನಿಯಮ ಉಲ್ಲಂಘಿಸುವ ಪ್ರಕಾಶಕರಿಂದ ಕಡ್ಡಾಯವಾಗಿ ದಂಡ ವಸೂಲಿ ಮಾಡಲಾಗುವುದು ಎಂದು ಪ್ರೆಸ್ ಡೆಪ್ಯುಟಿ ಪ್ರೆಸ್ ರಿಜಿಸ್ಟ್ರಾರ್ ಜನರಲ್ ರತ್ನಾಕರ್ ಪಾಮುಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರದ್ದಾದ ಪತ್ರಿಕೆಗಳ ಶೀರ್ಷಿಕೆಗಳ ಮರುಸ್ಥಾಪನೆಗೆ ದಂಡ ಪಾವತಿಸಲು ಜೂ. 30 ಕೊನೆಯ ದಿನ

ವಾರ್ಷಿಕ ವರದಿಗಳನ್ನು (ಎನ್‌ನುವಲ್ ಸ್ಟೇಟ್‌ಮೆಂಟ್) (Annual Statements) ಸಲ್ಲಿಸದ ಕಾರಣಕ್ಕಾಗಿ ರದ್ದಾಗಿರುವ ಪತ್ರಿಕೆಗಳ ಶೀರ್ಷಿಕೆಗಳನ್ನು (ಟೈಟಲ್ಸ್) (Titles) ಮರುಸ್ಥಾಪಿಸಲು ಭಾರತ ಸರ್ಕಾರದ ಪತ್ರಿಕೆಗಳ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿಯು (ಪಿ.ಆರ್.ಜಿ.ಐ) (PRGI) ಪ್ರಕಾಶಕರಿಗೆ ಕೊನೆಯ ಅವಕಾಶವನ್ನು ನೀಡಿದೆ.

 ಪ್ರೆಸ್ ಮತ್ತು ರಿಜಿಸ್ಟ್ರೇಷನ್ ಆಫ್ ಪಿರಿಯಾಡಿಕಲ್ಸ್ (ಪಿ.ಆರ್.ಪಿ) (PRP) ಕಾಯ್ದೆ, 2023 ರ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಹಲವು ಪತ್ರಿಕೆಗಳ ಶೀರ್ಷಿಕೆಗಳನ್ನು ರದ್ದುಗೊಳಿಸಲಾಗಿತ್ತು. ಈ ಕುರಿತು ಪ್ರಕಾಶಕರು ಮತ್ತು ಪಾಲುದಾರರಿಂದ ಬಂದ ಮನವಿಗಳನ್ನು ಪುರಸ್ಕರಿಸಿ, ಇಲಾಖೆಯು ಈ ಅಂತಿಮ ಅವಕಾಶವನ್ನು ಕಲ್ಪಿಸಿದೆ.

 ಬಾಕಿ ಇರುವ ದಂಡವನ್ನು ಪಾವತಿಸಲು ಮತ್ತು ವಾರ್ಷಿಕ ವರದಿಯನ್ನು ಸಲ್ಲಿಸಲು 30 ಜೂನ್ 2026 ಕೊನೆಯ ದಿನವಾಗಿದೆ.

 ರದ್ದಾದ ಪಟ್ಟಿಯಿಂದ ಶೀರ್ಷಿಕೆಯನ್ನು ತೆಗೆದುಹಾಕಲು, ಪ್ರಕಾಶಕರು ಬಾಕಿ ಇರುವ ದಂಡವನ್ನು ಪಾವತಿಸಬೇಕು ಮತ್ತು 2024-25ರ ಆರ್ಥಿಕ ವರ್ಷದ ವಾರ್ಷಿಕ ವರದಿಯನ್ನು ಪ್ರೆಸ್ ಸೇವಾ ಪೋರ್ಟಲ್ (Press Sewa Portal) ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕು.

 ಜೂನ್ 30 ರ ನಂತರ ಯಾವುದೇ ಕಾರಣಕ್ಕೂ ಕಾಲಾವಕಾಶವನ್ನು ವಿಸ್ತರಿಸಲಾಗುವುದಿಲ್ಲ. ಈ ಗಡುವಿನೊಳಗೆ ದಂಡ ಪಾವತಿಸದಿದ್ದರೆ ಶೀರ್ಷಿಕೆಗಳನ್ನು ಶಾಶ್ವತವಾಗಿ ರದ್ದುಗೊಳಿಸಲಾಗುವುದು ಮತ್ತು ಈ ಬಗ್ಗೆ ಯಾವುದೇ ಮೇಲ್ಮನವಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಉಪ ಪ್ರೆಸ್ ರಿಜಿಸ್ಟ್ರಾರ್ ಜನರಲ್ ರತ್ನಾಕರ್ ಪಾಮುಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular