HomeInternationalBREAKING: ಹೊಸ ವರ್ಷ ಸ್ವಾಗತಿಸಿದ ನ್ಯೂಜಿಲೆಂಡ್, ಆಸ್ಟ್ರೇಲಿಯಾ: ಬೆಳಕಿನ ಚಿತ್ತಾರದೊಂದಿಗೆ ಮುಗಿಲು ಮುಟ್ಟಿದ ಸಂಭ್ರಮಾಚರಣೆ

BREAKING: ಹೊಸ ವರ್ಷ ಸ್ವಾಗತಿಸಿದ ನ್ಯೂಜಿಲೆಂಡ್, ಆಸ್ಟ್ರೇಲಿಯಾ: ಬೆಳಕಿನ ಚಿತ್ತಾರದೊಂದಿಗೆ ಮುಗಿಲು ಮುಟ್ಟಿದ ಸಂಭ್ರಮಾಚರಣೆ

ನ್ಯೂಜಿಲೆಂಡ್, ಆಸ್ಟ್ರೇಲಿಯಾದಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಆಕ್ಲೆಂಡ್, ಸಿಡ್ನಿ, ಮೆಲ್ಬೋರ್ನ್ ನಲ್ಲಿ ಅದ್ಭುತ ಬೆಳಕಿನ ಪ್ರದರ್ಶನ ಮತ್ತು ಪಟಾಕಿಗಳೊಂದಿಗೆ ಹೊಸ ವರ್ಷ ಬರಮಾಡಿಕೊಳ್ಳಲಾಗಿದೆ.

ನ್ಯೂಜಿಲೆಂಡ್‌ನ ಅತಿ ಎತ್ತರದ ಸ್ಕೈ ಟವರ್‌ ನಿಂದ ವರ್ಣರಂಜಿತ ಪಟಾಕಿಗಳು ಮತ್ತು ಅದ್ಭುತವಾದ ಡೌನ್‌ಟೌನ್ ಲೈಟ್ ಶೋನಿಂದ ಕಣ್ಮನ ತಣಿಸುವ ಶೋನೊಂದಿಗೆ ಹೊಸ ವರ್ಷ ಬರಮಾಡಿಕೊಳ್ಳಲಾಗಿದೆ. ಆಕ್ಲೆಂಡ್ 2025 ಅನ್ನು ಸ್ವಾಗತಿಸುವ ಮೊದಲ ಪ್ರಮುಖ ನಗರವಾಗಿದೆ. ಸಾವಿರಾರು ಜನರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಆಸ್ಟ್ರೇಲಿಯಾದಲ್ಲಿಯೂ ಸಂಭ್ರಮಾಚರಣೆ ಜೋರಾಗಿದೆ. ಸಿಡ್ನಿಯ ಹೊಸ ವರ್ಷದ ಆಚರಣೆಯ ಮೊದಲ ಭಾಗವಾಗಿ ಮಧ್ಯರಾತ್ರಿಯ ಮೊದಲು ಆಕರ್ಷ ಸಿಡಿಮದ್ದು ಪ್ರದರ್ಶನದೊಂದಿಗೆ ಸಂಭ್ರಮಾಚರಣೆ ನಡೆದಿದೆ. ಹೊಸ ವರ್ಷ ಸ್ವಾಗತಿಸಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ದಕ್ಷಿಣ ಪೆಸಿಫಿಕ್ ಮಹಾಸಾಗರದ ದೇಶಗಳು ಮೊದಲಿಗೆ ಹೊಸ ವರ್ಷ ಸ್ವಾಗತಿಸುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular