ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಹೊಸ ವರ್ಷ ನಮ್ಮ ದೇಶವನ್ನು ಶಾಂತಿ ಸಮೃದ್ಧಿ ಮತ್ತು ಏಕತೆ ಮಾರ್ಗದಲ್ಲಿ ಮುನ್ನಡೆಸುವ ಅವಕಾಶ ಒದಗಿಸಲು ಎಂದು ತಿಳಿಸಿದ್ದಾರೆ.
ಹೊಸ ವರ್ಷ ಎಲ್ಲರಿಗೂ ಸಂತೋಷ, ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ. ದೇಶದ ಭವಿಷ್ಯದತ್ತ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದು ರಾಜ್ಯಪಾಲರು ಶುಭಾಶಯ ಕೋರಿದ್ದಾರೆ.

