HomeKarnatakaBIG NEWS: ನ್ಯೂ ಇಯರ್ ಪಾರ್ಟಿ ವೇಳೆ ಮೂಗು ಕಚ್ಚಿ ಯುವಕನ ಮೇಲೆ ಹಲ್ಲೆ

BIG NEWS: ನ್ಯೂ ಇಯರ್ ಪಾರ್ಟಿ ವೇಳೆ ಮೂಗು ಕಚ್ಚಿ ಯುವಕನ ಮೇಲೆ ಹಲ್ಲೆ

ಮಂಗಳೂರು: ನ್ಯೂ ಇಯರ್ ಪಾರ್ಟಿ ವೇಳೆ ವ್ಯಕ್ತಿಯೋರ್ವ ಯುವಕನ ಮೂಗು ಕಚ್ಚಿ ಹಲ್ಲೆ ನಡೆಸಿರುವ ವಿಲಕ್ಷಣ ಘಟನೆ ದಕ್ಷಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದಲ್ಲಿ ನಡೆದಿದೆ.

ಉಲ್ಪೆ ಗ್ರಾಮದ ನಿವಾಸಿ ದೀಕ್ಷಿತ್ (28) ಹಲ್ಲೆಗೊಳಗಾದ ಯುವಕ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ ರಾಕೇಶ್ ಎಂಬಾತ, ದೀಕ್ಷಿತ್ ನ ಮೂಗು ಕಚ್ಚಿ ಹಲ್ಲೆ ನಡೆಸಿದ್ದಾನೆ.

ಹೊಸ ವರ್ಷಾಚರಣೆಯ ಪಾರ್ಟಿ ವೇಳೆ ಮದ್ಯ ಸೇವಿಸಿ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ರಾಕೇಶ್ ದೀಕ್ಷಿತ್ ನ ಮೂಗನ್ನೆ ಕಚ್ಚಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ದೀಕ್ಷಿತ್ ನನ್ನು ಗುರುವಾಯನಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular