HomeIndiaಕೇಂದ್ರದಿಂದ ಹೊಸ ಯೋಜನೆ ಜಾರಿ: ವಾಹನ ಸಾಲ ತೀರಿದ ಕೂಡಲೇ ಅಡಮಾನ ಸ್ವಯಂಚಾಲಿತ ರದ್ದು

ಕೇಂದ್ರದಿಂದ ಹೊಸ ಯೋಜನೆ ಜಾರಿ: ವಾಹನ ಸಾಲ ತೀರಿದ ಕೂಡಲೇ ಅಡಮಾನ ಸ್ವಯಂಚಾಲಿತ ರದ್ದು

ನವದೆಹಲಿ: ವಾಹನಕ್ಕಾಗಿ ಪಡೆದಿದ್ದ ಸಾಲ ತೀರಿದ ಕೂಡಲೇ ಆಡಮಾನ ಸ್ವಯಂಚಾಲಿತವಾಗಿ ರದ್ದಾಗುವಂತಹ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ವಾಹನ ಸಾಲ ಚುಕ್ತಾ ಆಗುತ್ತಿದ್ದಂತೆ ಅಡಮಾನ ಇನ್ನು ಸ್ವಯಂ ರದ್ದಾಗಲಿದೆ. ಇದರಿಂದ ವಾಹನ ಮಾಲೀಕರು ಆರ್.ಟಿ.ಒ. ಕಚೇರಿಗೆ ಅಲೆದಾಡುವುದು ತಪ್ಪಲಿದೆ.

ವಾಹನಕ್ಕಾಗಿ ಪಡೆದಿದ್ದ ಸಾಲ ತೀರಿದ ನಂತರ ಸಾಲ ನೀಡಿದ ಸಂಸ್ಥೆಯ ಹೆಸರು ತೆಗೆಯಲು ಪದೇಪದೇ ಬ್ಯಾಂಕ್ ಮತ್ತು ಆರ್.ಟಿ.ಒ. ಕಚೇರಿಗೆ ತೆರಳಬೇಕಿತ್ತು. ಈಗ ಸಾಲ ತೀರಿದ ಕೂಡಲೇ ಆರ್‌.ಸಿ.ಯಲ್ಲಿ ಸಾಲ ನೀಡಿದ ಬ್ಯಾಂಕ್ ಹೆಸರು ಸ್ವಯಂಚಾಲಿತವಾಗಿ ರದ್ದಾಗಲಿದೆ.

ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮಾರ್ಚ್ 1ರಿಂದಲೇ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆರಂಭಿಕ ಹಂತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಚೋಳಮಂಡಲಂ, ಶ್ರೀರಾಮ್ ಫೈನಾನ್ಸ್, ಸುಂದರಂ ಫೈನಾನ್ಸ್ ಸೇರಿದಂತೆ 5 ಹಣಕಾಸು ಸಂಸ್ಥೆಗಳು ಈ ವ್ಯವಸ್ಥೆ ಜಾರಿಗೊಳಿಸಲಿವೆ. ನಂತರ ಇತರೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಇದನ್ನು ಅಳವಡಿಸಿಕೊಳ್ಳಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯುನಿಫೈಡ್ ಲೇಂಡಿಂಗ್ ಇಂಟರ್ಫೇಸ್ ಬಳಸಿಕೊಂಡು ಈ ವ್ಯವಸ್ಥೆ ಜಾರಿಯಾಗಲಿದೆ. ಸಾಲ ತೀರಿದ ನಂತರ ವಾಹನ ಮಾಲೀಕನಿಗೆ ಇ- ವಾಹನ ಪೋರ್ಟಲ್ ಮೂಲಕ ಎಸ್ಎಂಎಸ್ ಕಳುಹಿಸಿಕೊಡಲಾಗುವುದು ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular