HomeKarnatakaBIG NEWS : ರಾಜ್ಯದ ಸರ್ಕಾರಿ ಬ್ಯಾಂಕ್ ಖಾತೆಗಳಿಗೆ ಹೊಸ ರೂಲ್ಸ್..! ಇನ್ಮುಂದೆ ಅಧಿಕೃತ ಸರ್ಕಾರಿ...

BIG NEWS : ರಾಜ್ಯದ ಸರ್ಕಾರಿ ಬ್ಯಾಂಕ್ ಖಾತೆಗಳಿಗೆ ಹೊಸ ರೂಲ್ಸ್..! ಇನ್ಮುಂದೆ ಅಧಿಕೃತ ಸರ್ಕಾರಿ ಇ-ಮೇಲ್ ಐಡಿ ಕಡ್ಡಾಯ

ಬೆಂಗಳೂರು : ಸರ್ಕಾರಿ ಬ್ಯಾಂಕ್ ಖಾತೆಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ. ಇನ್ನು ಮುಂದೆ ಎಲ್ಲಾ ಸರ್ಕಾರಿ ಬ್ಯಾಂಕ್ ಖಾತೆಗಳ ದಾಖಲೆಗಳಲ್ಲಿ ಅಧಿಕೃತ ಸರ್ಕಾರಿ ಡೊಮೇನ್‌ನ ಇ-ಮೇಲ್ ಐಡಿಗಳನ್ನು ಮಾತ್ರ ಕಡ್ಡಾಯವಾಗಿ ಬಳಸಬೇಕು ಎಂದು ಆರ್ಥಿಕ ಇಲಾಖೆ ನಿರ್ದೇಶನ ನೀಡಿದೆ.

ಭಾರತ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯ ನಿರ್ದೇಶನದ ಹಿನ್ನೆಲೆಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದ್ದು, ಬ್ಯಾಂಕ್ ಖಾತೆಗಳಲ್ಲಿ ಸಂವಹನ ವಿವರಗಳ ಲೋಪದಿಂದ ಕೆಲ ಸರ್ಕಾರಿ ಖಾತೆಗಳಲ್ಲಿ ವಂಚನೆ ಪ್ರಕರಣಗಳು ನಡೆದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರಿ ಬ್ಯಾಂಕ್ ಖಾತೆಗಳಿಗೆ ಅಧಿಕೃತ ಸರ್ಕಾರಿ ಡೊಮೇನ್‌ಗೆ ಸೇರದ ವೈಯಕ್ತಿಕ ಅಥವಾ ಇತರೆ ಇ-ಮೇಲ್ ಐಡಿಗಳನ್ನು ಬಳಸುವುದರಿಂದ ಅನಧಿಕೃತ ಬದಲಾವಣೆ, ಸಂವಹನ ವ್ಯವಸ್ಥೆಯ ದುರುಪಯೋಗ ಹಾಗೂ ಆರ್ಥಿಕ ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳು, ಕಚೇರಿಗಳು, ಹಣಕಾಸು ಮತ್ತು ಬಟವಾಡೆ ಅಧಿಕಾರಿಗಳು (DDOs), ಖಜಾನೆ ಅಧಿಕಾರಿಗಳು, ಸಿಂಗಲ್ ನೋಡಲ್ ಏಜೆನ್ಸಿ (SNA) ಆಪರೇಟರ್‌ಗಳು ಹಾಗೂ ಅಧಿಕೃತ ಸಹಿದಾರರು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಸುತ್ತೋಲೆಯ ಪ್ರಮುಖ ಸೂಚನೆಗಳು

  • ಎಲ್ಲಾ ಸರ್ಕಾರಿ ಬ್ಯಾಂಕ್ ಖಾತೆಗಳಲ್ಲಿ ಅಧಿಕೃತ ಸರ್ಕಾರಿ ಡೊಮೇನ್‌ನ ಇ-ಮೇಲ್ ಐಡಿಗಳನ್ನು ಮಾತ್ರ ನೋಂದಾಯಿಸಿ ನಿರ್ವಹಿಸಬೇಕು.
  • ಖಾತೆಗಳಿಗೆ ಲಿಂಕ್ ಆಗಿರುವ ವೈಯಕ್ತಿಕ ಅಥವಾ ಅಧಿಕೃತವಲ್ಲದ ಇ-ಮೇಲ್ ಐಡಿಗಳನ್ನು ತಕ್ಷಣವೇ ತೆಗೆದು, ಅಧಿಕೃತ ಸರ್ಕಾರಿ ಇ-ಮೇಲ್ ಐಡಿಗಳನ್ನು ನೋಂದಾಯಿಸಬೇಕು.
  • ಬ್ಯಾಂಕ್ ದಾಖಲೆಗಳಲ್ಲಿರುವ ಇ-ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಗಳ ನಿಖರತೆಯನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು.
  • ಸಂಪರ್ಕ ವಿವರಗಳಲ್ಲಿ ಬದಲಾವಣೆ ಮಾಡುವ ಯಾವುದೇ ವಿನಂತಿಯನ್ನು ಕಡ್ಡಾಯವಾಗಿ ಆಂತರಿಕ ದೃಢೀಕರಣ ಮತ್ತು ಸಮಗ್ರ ಪರಿಶೀಲನೆಯ ಬಳಿಕವೇ ಅನುಮೋದಿಸಬೇಕು.

ಸರ್ಕಾರದ ಈ ಕ್ರಮದಿಂದ ಸರ್ಕಾರಿ ಬ್ಯಾಂಕ್ ಖಾತೆಗಳ ಭದ್ರತೆ ಹೆಚ್ಚುವುದರ ಜೊತೆಗೆ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ನೆರವಾಗಲಿದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular