HomeKarnatakaಪ್ಯಾಂಟ್ ಜೇಬಲ್ಲಿ ಫೋನ್ ಇಟ್ಟುಕೊಳ್ಳುವವರೇ ಹುಷಾರ್; ಯುವಕನ ಬಾಳಿಗೆ ಕಂಟಕವಾಯ್ತು ಹೊಸ ಮೊಬೈಲ್

ಪ್ಯಾಂಟ್ ಜೇಬಲ್ಲಿ ಫೋನ್ ಇಟ್ಟುಕೊಳ್ಳುವವರೇ ಹುಷಾರ್; ಯುವಕನ ಬಾಳಿಗೆ ಕಂಟಕವಾಯ್ತು ಹೊಸ ಮೊಬೈಲ್

ಬೆಂಗಳೂರು: ಪ್ಯಾಂಟ್ ಜೇಬಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆಗಿ ಯುವಕನ ಬಾಳಿಗೆ ಕಂಟಕವಾಗಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ.

ಅಕ್ಟೋಬರ್ ನಲ್ಲಿ ಖರೀದಿಸಿದ್ದ ಒನ್ ಪ್ಲಸ್ ಕಂಪನಿ ಮೊಬೈಲ್ ನ್ನು 24 ವರ್ಷದ ಯುವಕ ಪ್ರಸಾದ್ ಎಂಬಾತ ತನ್ನ ಪ್ಯಾಂಟ್ ಜೇಬ್ ನಲ್ಲಿಟ್ಟುಕೊಂಡಿದ್ದ. ಈ ವೇಳೆ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದ್ದು, ಯುವಕನ ತೊಡೆಯ ಭಾಗದಲ್ಲಿ ಗಂಭೀರವಾದ ಗಾಯಗಳಾಗಿವೆ. ಯುವಕ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಸರ್ಜರಿಗೆ 4 ಲಕ್ಷ ಖರ್ಚು ಆಗುವುದಾಗಿ ಹೇಳಿದ್ದಾರೆ.

ಹೊಸ ಮೊಬೈಲ್ ಕೇವಲ ಮೂರು ತಿಂಗಳಲ್ಲಿ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಯುವಕ ಸರ್ಜರಿಯ ಸಂಪೂರ್ಣ ಬಿಲ್ ನ್ನು ಕಂಪನಿಯೇ ಭರಿಸುವಂತೆ ಪಟ್ಟು ಹಿಡಿದಿದ್ದಾನೆ. ಆದರೆ ಕಂಪನಿ ಆರಂಭದಲ್ಲಿ ಔಷಧಿ ಬಿಲ್ ಕೊಡುವುದಾಗಿ ಹೇಳಿದ್ದು, ಇದೀಗ ಯಾವುದೇ ಸೂಕ್ತ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular