ಬೆಂಗಳೂರು: ರಾಜ್ಯದಲ್ಲಿ ನಿತ್ಯಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ, ಅದರಲ್ಲೂ ವಿಶೇಷವಾಗಿ ಮದ್ಯಪ್ರಿಯರಿಗೆ ಕರ್ನಾಟಕ ಸರ್ಕಾರ ಹೊಸ ಶಾಕ್ ಹಾಗೂ ಬಿಗ್ ರಿಲೀಫ್ ಎರಡನ್ನೂ ಒಟ್ಟಿಗೆ ನೀಡಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ನೂತನ ಅಬಕಾರಿ ನೀತಿ (ಕರ್ನಾಟಕ ಅಬಕಾರಿ 2ನೇ ತಿದ್ದುಪಡಿ ನಿಯಮಗಳು 2026) ಮೇ 11 ರಿಂದ ಅಧಿಕೃತವಾಗಿ ಜಾರಿಗೆ ಬಂದಿದ್ದು ಮಾರುಕಟ್ಟೆಯಲ್ಲಿ ಮದ್ಯದ ದರಗಳು ತಲ್ಲಣಗೊಂಡಿವೆ.ಹೊಸ ನಿಯಮದಡಿ ಬಿಯರ್ ಮತ್ತು ಪ್ರೀಮಿಯಂ ಸ್ಕಾಚ್ ಬೆಲೆಗಳು ಶೇ. 20 ರಿಂದ 25 ರಷ್ಟು ಕಡಿತಗೊಂಡಿದ್ದರೆ, ಜನಸಾಮಾನ್ಯರು ಕುಡಿಯುವ ಸಾಮಾನ್ಯ ಮದ್ಯದ ಬೆಲೆ ಗಗನಕ್ಕೇರಿದೆ.
ಏನಿದು ಹೊಸ ಎಐಬಿ (AiB) ತೆರಿಗೆ ಪದ್ಧತಿ?
ಬೃಹತ್ ಲೀಟರ್ ಮದ್ಯದ ಮೇಲೆ ದೇಶದಲ್ಲೇ ಆರು ದಶಕಗಳಿಗೂ ಹಳೆಯದಾಗಿದ್ದ ಸಾಂಪ್ರದಾಯಿಕ ತೆರಿಗೆ ನೀತಿಯನ್ನು ಬದಲಾಯಿಸಿ, ಆಲ್ಕೋಹಾಲ್ ಇನ್ ಬಿವೇಜ್ (AIB) ನೀತಿಯನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಇನ್ಮುಂದೆ ಮದ್ಯದ ಬ್ರ್ಯಾಂಡ್ ಆಧರಿಸದೇ, ಪ್ರತಿ ಲೀಟರ್ ಮದ್ಯದಲ್ಲಿರುವ ಆಲ್ಕೋಹಾಲ್ ಅಂಶ/ಪರಿಮಾಣದ (Alcohol Content) ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ.ಇದಕ್ಕಾಗಿ ಸರ್ಕಾರವು ಈ ಹಿಂದೆ ಇದ್ದ 16 ಅಬಕಾರಿ ಸ್ಲ್ಯಾಬ್‌ಗಳನ್ನು ಕಡಿತಗೊಳಿಸಿ ಕೇವಲ 8 ಸ್ಲ್ಯಾಬ್‌ಗಳಿಗೆ ಇಳಿಸಿದೆ. ಇದರ ನೇರ ಪರಿಣಾಮ ಕೆಲವು ಬ್ರ್ಯಾಂಡ್‌ಗಳಿಗೆ ವರವಾದರೆ, ಇನ್ನು ಕೆಲವು ಬ್ರ್ಯಾಂಡ್‌ಗಳಿಗೆ ಶಾಪವಾಗಿದೆ.
ಬಿಯರ್ ಪ್ರಿಯರಿಗೆ ಹಬ್ಬ: ಯಾವ ಬ್ರ್ಯಾಂಡ್‌ಗೆ ಎಷ್ಟು ಇಳಿಕೆ?ಶೇಕಡಾ 5 ರಷ್ಟು ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಎಂಆರ್‌ಪಿ (MRP) ದರದಲ್ಲಿ ಶೇ. 20 ರಿಂದ 25 ರಷ್ಟು ಇಳಿಕೆಯಾಗಿದೆ. ಪ್ರಮುಖ ಲಿಸ್ಟ್ ಇಲ್ಲಿದೆ:
ಯಾವ ಬ್ರ್ಯಾಂಡ್‌ನ ಹೊಸ ರೇಟ್ ಎಷ್ಟು? ಇಲ್ಲಿದೆ ಲಿಸ್ಟ್:
ಹೊಸ ತೆರಿಗೆ ಪದ್ಧತಿಯ ಅನ್ವಯ ಪ್ರಮುಖ ಬಿಯರ್ ಬ್ರ್ಯಾಂಡ್‌ಗಳ ಪರಿಷ್ಕೃತ ದರಗಳ ವಿವರ ಹೀಗಿದೆ:
ಕಿಂಗ್ ಫಿಶರ್ ಪ್ರಿಮಿಯಂ (Kingfisher Premium): ಮೊದಲು 185 ರೂ. ಇತ್ತು, ಈಗ 110 ರೂ. ಆಗಿದೆ. (ಒಟ್ಟು 75 ರೂ. ಇಳಿಕೆ)
ಹೈನೆಕೆನ್ ಸಿಲ್ವರ್ (Heineken Silver – 650 ml): ಮೊದಲು 270 ರೂ. ಇತ್ತು, ಈಗ 195 ರೂ. ಆಗಿದೆ. (ಒಟ್ಟು 75 ರೂ. ಇಳಿಕೆ)
ಕಿಂಗ್ ಫಿಶರ್ ಅಲ್ಟ್ರಾ (Kingfisher Ultra): ಮೊದಲು 225 ರೂ. ಇತ್ತು, ಈಗ 150 ರೂ. ಆಗಿದೆ. (ಒಟ್ಟು 75 ರೂ. ಇಳಿಕೆ)
ಬಡ್ ವೈಸರ್ ಪ್ರಿಮಿಯಂ (Budweiser Premium): ಮೊದಲು 225 ರೂ. ಇತ್ತು, ಈಗ 205 ರೂ. ಆಗಿದೆ. (ಒಟ್ಟು 20 ರೂ. ಇಳಿಕೆ)
ಶ್ರೀಮಂತರಿಗೆ ಸಮಾಧಾನ: ಪ್ರೀಮಿಯಂ ಸ್ಕಾಚ್ ವಿಸ್ಕಿ ಭಾರಿ ಅಗ್ಗ
ಹೊಸ ನೀತಿಯಿಂದಾಗಿ ವಿದೇಶಿ ಬ್ರ್ಯಾಂಡ್‌ನ ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯೂ ಕೂಡ ಶೇ. 20 ರಷ್ಟು ಕಡಿಮೆಯಾಗಿದೆ. ಇದು ಶ್ರೀಮಂತ ವರ್ಗದ ಮದ್ಯಪ್ರಿಯರಿಗೆ ದೊಡ್ಡ ಸಮಾಧಾನ ತಂದಿದೆ.
ಬ್ಲ್ಯಾಕ್ ಲೇಬಲ್ (ಶೇ. 43 ಆಲ್ಕೋಹಾಲ್) ಮತ್ತು ಚಿವಾಸ್ ರೀಗಲ್ (ಶೇ. 40 ಆಲ್ಕೋಹಾಲ್) ನಂತಹ ಪ್ರೀಮಿಯಂ ಬ್ರ್ಯಾಂಡ್‌ಗಳ 750 ML ಬಾಟಲಿಯ ಬೆಲೆ ಬರೋಬ್ಬರಿ ₹5,190 ರಿಂದ ₹4,100 ಕ್ಕೆ ಇಳಿಕೆಯಾಗಿದೆ (ಒಂದೇ ಬಾಟಲಿಗೆ ₹1,090 ಉಳಿತಾಯ).
ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ಬಿಗ್ ಶಾಕ್
ಒಂದೆಡೆ ಬಿಯರ್-ಸ್ಕಾಚ್ ಬೆಲೆ ಇಳಿಕೆಯಾಗಿದ್ದರೆ ಇನ್ನೊಂದೆಡೆ 180 ಮಿಲಿ (ನಿಪ್) ಟೆಟ್ರಾ ಪ್ಯಾಕ್‌ಗಳಲ್ಲಿ ಮಾರಾಟವಾಗುವ ಭಾರತೀಯ ನಿರ್ಮಿತ ಮದ್ಯದ (IML) ಮೊದಲ ಐದು ಅಬಕಾರಿ ಸ್ಲ್ಯಾಬ್‌ಗಳ ಬೆಲೆಗಳು ಶೇ. 20 ರಿಂದ 25 ರಷ್ಟು ಹೆಚ್ಚಳವಾಗಿದೆ. ಈ ಮೊದಲ ಐದು ಸ್ಲ್ಯಾಬ್‌ಗಳೇ ಸರ್ಕಾರದ ಅಬಕಾರಿ ಆದಾಯಕ್ಕೆ ಶೇ. 75 ರಿಂದ 80 ರಷ್ಟು ಕೊಡುಗೆ ನೀಡುತ್ತವೆ.
ಓಲ್ಡ್ ಮಾಂಕ್ (Old Monk): ಶೇಕಡಾ 42.8 ರಷ್ಟು ಆಲ್ಕೋಹಾಲ್ ಹೊಂದಿರುವ, ಐದನೇ ಸ್ಲ್ಯಾಬ್‌ಗೆ ಸೇರುವ ಅತ್ಯಂತ ಜನಪ್ರಿಯ ರಮ್ ಬ್ರ್ಯಾಂಡ್ ಓಲ್ಡ್ ಮಾಂಕ್‌ನ ಹೊಸ ಎಂಆರ್‌ಪಿ ದರ ₹765 ರಿಂದ ₹850 ಕ್ಕೆ ಏರಿಕೆಯಾಗಿದೆ

