HomeKarnatakaBIG NEWS: ನವಜಾತ ಶಿಶುವನ್ನು ಮನೆ ಬಾಗಿಲ ಬಳಿ ಇಟ್ಟು ಎಸ್ಕೇಪ್ ಆದ ದುರುಳರು

BIG NEWS: ನವಜಾತ ಶಿಶುವನ್ನು ಮನೆ ಬಾಗಿಲ ಬಳಿ ಇಟ್ಟು ಎಸ್ಕೇಪ್ ಆದ ದುರುಳರು

ವಿಜಯಪುರ: ನವಜಾತ ಶಿಶುವನ್ನು ಮನೆ ಬಾಗಿಲ ಬಳಿ ಇಟ್ಟು ದುರುಳರು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಾಲುಕ್ಯ ನಗರದಲ್ಲಿ ನಡೆದಿದೆ.

ಬಿ.ಜಿ.ಪೊಲೀಸ್ ಪಾಟೀಲ್ ಎಂಬುವವರ ಮನೆಯ ಹೊಸ್ತಿಲಿನ ಬಳಿ ಮಗುವನ್ನು ಇಟ್ಟು ಹೋಗಿದ್ದಾರೆ. ಮಗು ಆಸ್ಪತ್ರೆಯಲ್ಲಿ ಜನಿಸಿದ್ದು, ಈ ಬಗೆಗಿನ ಸ್ಲಿಪ್ ಜೊತೆಗೆ ಮಗುವನ್ನು ಇಟ್ಟಿದ್ದಾರೆ. ಅಲ್ಲದೇ ನವಜಾತ ಗಂಡು ಶಿಶು ಇದಾಗಿದ್ದು, ಅದಾಗಲೇ ಸಾವನ್ನಪ್ಪಿದೆ.

ಶಿಶುವಿನ ದೇಹದ ಮೇಲೆ ಕಪ್ಪು ಕಪ್ಪು ಕಲೆಗಳಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಶಿಶು ಆಸ್ಪತ್ರೆಯಲ್ಲಿ ಸಾವನ್ನಪ್ಪಿರಬಹುದು. ಬಳಿಕ ಮನೆ ಬಾಗಿಲ ಮುಂದಿಟ್ಟು ದುರುಳರು ಹೋಗಿರಬಹುದು ಎಂದು ಶಂಕಿಸಲಾಗಿದೆ. ಮನೆ ಬಾಡಿಗೆಗೆ ಇದ್ದ ವಿದ್ಯಾರ್ಥಿನಿಯರು ಬೆಳಿಗ್ಗೆ ಬಾಗಿಲು ತೆರೆದಾಗ ಹೊಸ್ತಿಲ ಬಳಿ ಇದ್ದ ನವಜಾತ ಶಿಶು ಕಂಡು ಶಾಕ್ ಆಗಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶಿಶುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಶಿಶುವಿನ ತಾಯಿ-ತಂದೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular