HomeKarnatakaಉದ್ಯೋಗಾಂಕ್ಷಿಗಳ ಗಮನಕ್ಕೆ : ಜೂ.27 ರಂದು ಮಡಿಕೇರಿಯಲ್ಲಿ ಉದ್ಯೋಗ ಮೇಳ ಆಯೋಜನೆ

ಉದ್ಯೋಗಾಂಕ್ಷಿಗಳ ಗಮನಕ್ಕೆ : ಜೂ.27 ರಂದು ಮಡಿಕೇರಿಯಲ್ಲಿ ಉದ್ಯೋಗ ಮೇಳ ಆಯೋಜನೆ

ಮಡಿಕೇರಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಉದ್ಯೋಗಮೇಳವು ಜೂನ್, 27 ರಂದು ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ‘ನಡೆಯಲಿದೆ.

ಉದ್ಯೋಗ ಮೇಳದಲ್ಲಿ ಪ್ಯಾಲೇಸ್ ಟೊಯಾಟೋ, ಕುಶಾಲನಗರ, ಅಟೋಲೈವ್ ಮಲ್ಟಿನ್ಯಾಷನಲ್ ಕಂಪನಿ, ಮೈಸೂರು, ಕ್ಲಬ್ ಮಹೀಂದ್ರ, ಮಡಿಕೇರಿ, ಕಲ್ಯಾಣಿ ಮೋಟಾರ್ಸ್, ಮಡಿಕೇರಿ, ಪೆಂಟಟೆಕ್, ಮಡಿಕೇರಿ, ಕಾವೇರಿ ಹೋಂಡಾ, ಕುಶಾಲನಗರ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಮೇಳದಲ್ಲಿ ಖಾಸಗಿ ಕಂಪೆನಿಗಳು ಭಾಗವಹಿಸಿ ತಮ್ಮಲ್ಲಿ ಖಾಲಿಯಿರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ಅಭ್ಯರ್ಥಿಗಳು ಸ್ವಯಂ-ವಿವರ (ಬಯೋಡೇಟಾ)ಗಳ ಪ್ರತಿಗಳೊಂದಿಗೆ ಉದ್ಯೋಗಮೇಳಕ್ಕೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿ ರೇಖಾ ಗಣಪತಿ ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ, ಈ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 8296020826 /8123312319 ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ರೇಖಾ ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular