HomeKarnatakaನಮ್ಮ ಮೆಟ್ರೋ ಹಸಿರು, ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ

ನಮ್ಮ ಮೆಟ್ರೋ ಹಸಿರು, ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ

ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಹೊಸ ಬಸ್ ನಿಲ್ದಾಣಗಳನ್ನು ಆರಂಭಿಸಿವೆ.

ಕೆಲವು ಪ್ರದೇಶಗಳಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣಗಳು ಮೆಟ್ರೋ ನಿಲ್ದಾಣಗಳಿಂದ ದೂರದಲ್ಲಿದ್ದು, ಮೆಟ್ರೋ ರೈಲು ಪ್ರಯಾಣಿಕರಿಗೆ ಕಷ್ಟವಾಗುತ್ತಿತ್ತು. ಮೆಟ್ರೋ ಪ್ರಯಾಣಿಕರ ಕೊನೆಯ ಹಂತದ ಸಂಪರ್ಕ (ಲಾಸ್ಟ್ ಮೈಲ್ ಕನೆಕ್ಟಿವಿಟಿ) ಸುಧಾರಿಸುವ ಉದ್ದೇಶದಿಂದ ಬಿಎಂಆರ್‌ಸಿಎಲ್, ಬಿಎಂಟಿಸಿ ಹಾಗೂ ಬೆಂಗಳೂರು ಸಂಚಾರ ಪೊಲೀಸರೊಂದಿಗೆ ಜಂಟಿಯಾದಿ ಸ್ಥಳ ಪರಿಶೀಲನೆ ನಡೆಸಲಾಗಿತ್ತು.

ಈಗ ಕೆಲವು ಮೆಟ್ರೋ ನಿಲ್ದಾಣಗಳ ಸಮೀಪ ಹೊಸ ಬಸ್ ನಿಲ್ದಾಣಗಳನ್ನು ಒದಗಿಸಲಾಗಿದೆ. ಹೊಸದಾಗಿ ಒದಗಿಸಲಾದ ಬಸ್ ನಿಲ್ದಾಣಗಳ ವಿವರಗಳು ಇಲ್ಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಟ್ರಿನಿಟಿ: ಎಂ.ಜಿ.ರಸ್ತೆಯಿಂದ ಹಲಸೂರು ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ (ಹೋಟೆಲ್ ಒಬೆರಾಯ್ ಎದುರು) ಹೊಸ ಬಸ್ ನಿಲ್ದಾಣ.

* ಹೂಡಿ: ಸೀತಾರಾಮಪಾಳ್ಯದಿಂದ ಗರುಡಾಚಾರ್‌ಪಾಳ್ಯ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ (ಡಿ-ಮಾರ್ಟ್ ಎದುರು) ಹೊಸ ನಿಲ್ದಾಣ.

* ಹಸಿರು ಮಾರ್ಗದಲ್ಲಿ ಮಂಜುನಾಥ ನಗರ. ಚಿಕ್ಕಬಿದರಕಲ್ಲು-ನಾಗಸಂದ್ರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಎ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಹೊಸ ಬಸ್‌ ನಿಲ್ದಾಣ.

* ಪೀಣ್ಯ: ಗೊರಗುಂಟೆಪಾಳ್ಯ-ಪೀಣ್ಯ ಕೈಗಾರಿಕಾ ಪ್ರದೇಶದ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ಮೆಟ್ರೋ ನಿಲ್ದಾಣದ ಎದುರಿನ ಸರ್ವಿಸ್ ರಸ್ತೆಯಲ್ಲಿ ಹೊಸ ಬಸ್‌ ನಿಲ್ದಾಣ. ಪೀಣ್ಯ ಕೈಗಾರಿಕಾ ಪ್ರದೇಶದಿಂದ ಗೋರಗುಂಟೆಪಾಳ್ಯ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಮತ್ತೊಂದು ಹೊಸ ಬಸ್ ನಿಲ್ದಾಣ.

* ಲಾಲ್‌ಬಾಗ್: ಸೌತ್ ಎಂಡ್ ಸರ್ಕಲ್‌ನಿಂದ ನ್ಯಾಷನಲ್ ಕಾಲೇಜ್ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಸಮೀಪ ಹೊಸ ಬಸ್ ನಿಲ್ದಾಣ.

* ಸೌತ್ ಎಂಡ್ ಸರ್ಕಲ್‌: ಲಾಲ್‌ಬಾಗ್‌-ಜಯನಗರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಎ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಮೊದಲು ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.

* ಜಯಪ್ರಕಾಶ್ ನಗರ: ಬನಶಂಕರಿ-ಯಲಚೇನಹಳ್ಳಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಸಿ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಎದುರು ಹೊಸ ಬಸ್ ನಿಲ್ದಾಣ.

* ಯಲಚೇನಹಳ್ಳಿ: ಯಲಚೇನಹಳ್ಳಿ-ಬನಶಂಕರಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಡಿ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಮತ್ತೊಂದು ಹೊಸ ಬಸ್ ನಿಲ್ದಾಣ.

* ಕೋಣನಕುಂಟೆ ಕ್ರಾಸ್: ದೊಡ ಕಲ್ಲಸಂದ್ರ-ಯಲಚೇನಹಳ್ಳಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಎ’ ಪ್ರವೇಶದ್ವಾರದ ಬಳಿ (ಪಿಲ್ಲರ್ ಸಂಖ್ಯೆ 147) ಮೆಟ್ರೋ ನಿಲ್ದಾಣದ ಸಮೀಪ ಹೊಸ ಬಸ್ ನಿಲ್ದಾಣ.

* ಯಲಚೇನಹಳ್ಳಿ: ಯಲಚೇನಹಳ್ಳಿ-ದೊಡ್ಡಕಲ್ಲಸಂದ್ರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ (ಪಿಲ್ಲರ್ ಸಂಖ್ಯೆ 148) ಮತ್ತೊಂದು ಹೊಸ ಬಸ್ ನಿಲ್ದಾಣ.

* ವಜ್ರಹಳ್ಳಿ: ತಲಘಟ್ಟಪುರ-ದೊಡ್ಡಕಲ್ಲಸಂದ್ರ ಕಡೆಗೆ ಸಂಚರಿಸುವ ಪಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಹೊಸ ಬಸ್ ನಿಲ್ದಾಣ. ದೊಡ್ಡಕಲ್ಲಸಂದ್ರ-ತಲಘಟ್ಟಪುರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಎ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಸಮೀಪ ಮತ್ತೊಂದು ಹೊಸ ಬಸ್ ನಿಲ್ದಾಣ

* ತಲಘಟ್ಟಪುರ: ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ವಜ್ರಹಳ್ಳಿ ಕಡೆಗೆ ಸಂಚರಿಸುವ ಪಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಸಮೀಪ ಹೊಸ ಬಸ್ ನಿಲ್ದಾಣ. ವಜ್ರಹಳ್ಳಿ-ಸಿಲ್ಕ್ ಇನ್‌ಸ್ಟಿಟ್ಯೂಟ್ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಎ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಮತ್ತೊಂದು ಹೊಸ ಬಸ್ ನಿಲ್ದಾಣ.

* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಗದಲ್ಲಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಟಿಸಿ ವಾಯುವಜ್ರ (ವಿಮಾನ ನಿಲ್ದಾಣ) ಬಸ್‌ಗಳಿಗಾಗಿ ಬಸ್‌ ನಿಲ್ದಾಣಗಳನ್ನು ಒದಗಿಸಲಾಗಿದೆ. ಪ್ರಯಾಣಿಕರು ನೇರವಾಗಿ ಮೆಟ್ರೋ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಹಾಗೂ ಬರುವ ಬಸ್‌ಗಳನ್ನು ಏರಬಹುದು ಅಥವಾ ಇಳಿಯಬಹುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular