HomeKarnatakaNEET-PG 2026 ಫಲಿತಾಂಶ ಪ್ರಕಟ; 641 ಅಂಕಗಳೊಂದಿಗೆ AIR 1 ಪಡೆದ ಡಾ. ಮೋನಿಶ್

NEET-PG 2026 ಫಲಿತಾಂಶ ಪ್ರಕಟ; 641 ಅಂಕಗಳೊಂದಿಗೆ AIR 1 ಪಡೆದ ಡಾ. ಮೋನಿಶ್

ನವದೆಹಲಿ: NEET-PG 2026ರ ಫಲಿತಾಂಶ ಪ್ರಕಟವಾಗಿದೆ. ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS) ಫಲಿತಾಂಶ ಬಿಡುಗಡೆ ಮಾಡಿದ್ದು, 720ಕ್ಕೆ 641 ಅಂಕ ಪಡೆದ ಅಭ್ಯರ್ಥಿ ದೇಶಕ್ಕೆ ಮೊದಲ ರ‍್ಯಾಂಕ್ ಗಳಿಸಿದ್ದಾರೆ.

NEET-PG ಪರೀಕ್ಷೆಯಲ್ಲಿ ಟಾಪ್ 20ರಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳು 614ರಿಂದ 641 ಅಂಕಗಳನ್ನು ಪಡೆದಿದ್ದಾರೆ. ಎರಡನೇ ರ‍್ಯಾಂಕ್‌ ಪಡೆದವರು 633 ಅಂಕ ಗಳಿಸಿದ್ದರೆ, ಮೂರನೇ ರ‍್ಯಾಂಕ್‌ ಪಡೆದ ಅಭ್ಯರ್ಥಿ 626 ಅಂಕ ಪಡೆದಿದ್ದಾರೆ.AIR 1 ಪಡೆದಿರುವ ಡಾ. ಮೋನಿಶ್ 641/720 ಅಂಕ ಗಳಿಸಿದ್ದಾರೆ. ಟಾಪ್ 20 ರ‍್ಯಾಂಕ್‌ಗಳ ಅಂಕಗಳು 614ರಿಂದ 641ರವರೆಗೆ ಇವೆ

ಈ ಬಾರಿ ಆಗಸ್ಟ್ 30ರಂದು ದೇಶದ 339 ನಗರಗಳ 1,111 ಕೇಂದ್ರಗಳಲ್ಲಿ NEET-PG ಪರೀಕ್ಷೆ ನಡೆದಿತ್ತು. ಒಟ್ಟು 2,73,096 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 2,65,980 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೈಪುರದ ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಕೆಲ ಅಭ್ಯರ್ಥಿಗಳಿಗೆ ಪರೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಲ್ಲಿನ 2,416 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 5ರಂದು ಮರುಪರೀಕ್ಷೆ ನಡೆಸಲಾಗಿತ್ತು.

ಇದೀಗ ಪ್ರಕಟವಾಗಿರುವ ಫಲಿತಾಂಶದಲ್ಲಿ ಅಭ್ಯರ್ಥಿಗಳ ಗಳಿಸಿದ ಅಂಕಗಳ ಜೊತೆಗೆ ಅಖಿಲ ಭಾರತ ರ‍್ಯಾಂಕ್‌ ವಿವರಗಳನ್ನೂ ನೀಡಲಾಗಿದೆ. NEET-PG ಅಂಕಗಳ ಆಧಾರದ ಮೇಲೆ MD, MS, DNB, DrNB ಸೇರಿದಂತೆ ವಿವಿಧ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯಲಿದೆ.

NEET-PG 2026: ವರ್ಗವಾರು ಕಟ್‌ಆಫ್

ಸಾಮಾನ್ಯ ವರ್ಗ (General): 262 ಅಂಕ

EWS: 262 ಅಂಕ

ಸಾಮಾನ್ಯ PwBD: 244 ಅಂಕ

SC: 226 ಅಂಕ

ST: 226 ಅಂಕ

OBC: 226 ಅಂಕ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular