HomeLatest Newsನೀಟ್ ಪ್ರತಿಭಟನೆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು ಮೋದಿ ಅಶ್ಲೀಲ ಎಡಿಟೆಡ್ ಫೋಟೊಗಳು!

ನೀಟ್ ಪ್ರತಿಭಟನೆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು ಮೋದಿ ಅಶ್ಲೀಲ ಎಡಿಟೆಡ್ ಫೋಟೊಗಳು!

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆಂದೋಲನದ ಸಂದರ್ಭದಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಶ್ಲೀಲ ಹಾಗೂ ದಾರಿತಪ್ಪಿಸುವ ರೀತಿಯಲ್ಲಿ ಬಿಂಬಿಸುವ ಕಂಟೆಂಟ್‌ಗಳು ಹರಿದಾಡಿದ್ದವು. ಇನ್‌ಸ್ಟಾಗ್ರಾಮ್ ಬ್ರೌಸ್ ಮಾಡುವಾಗ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಪ್ರಧಾನಿ ಇರುವ ಮಾರ್ಫ್ ಮಾಡಿದ ಮತ್ತು AI ಆಧಾರಿತ ದೃಶ್ಯಗಳನ್ನು ಗಮನಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ರೀತಿಯ ಪೋಸ್ಟ್‌ಗಳು ಸಾರ್ವಜನಿಕರಲ್ಲಿ ತಪ್ಪು ಮಾಹಿತಿಯನ್ನು ಹರಡುವುದು ಮಾತ್ರವಲ್ಲದೆ, ಸಮಾಜದ ಶಾಂತಿ-ಸುವ್ಯವಸ್ಥೆಗೆ ಭಂಗ ತರುವ ಮತ್ತು ದ್ವೇಷವನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ದೂರುದಾರರು ಆರೋಪಿಸಿದ್ದಾರೆ.

ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಾಗೂ ಆಕ್ಷೇಪಾರ್ಹ ಲಿಂಕ್‌ಗಳನ್ನು ಹಂಚಿಕೊಂಡವರ ವಿವರಗಳನ್ನು ಕಲೆಹಾಕಲು ಸೈಬರ್ ಕ್ರೈಮ್ ಪೊಲೀಸರು ಮೆಟಾ ಸಂಸ್ಥೆಗೆ ಅಧಿಕೃತ ನೋಟಿಸ್ ಜಾರಿಗೊಳಿಸಿದ್ದಾರೆ. ಖಾತೆಗಳ ನಿರ್ವಾಹಕರ ನೈಜ ವಿವರಗಳನ್ನು ಸಂಗ್ರಹಿಸಿ ಶೀಘ್ರದಲ್ಲೇ ತನಿಖೆ ತೀವ್ರಗೊಳಿಸುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular