HomeBeautyಬ್ಲಾಕ್ ಹೆಡ್ ನಿವಾರಿಸಲು ಇಲ್ಲಿವೆ ಟಿಪ್ಸ್

ಬ್ಲಾಕ್ ಹೆಡ್ ನಿವಾರಿಸಲು ಇಲ್ಲಿವೆ ಟಿಪ್ಸ್

ಬ್ಲ್ಯಾಕ್ ಹೆಡ್ ಸಮಸ್ಯೆ ಹೆಚ್ಚಿನ ಮಂದಿಗೆ ಕಾಡುವುದುಂಟು. ಇದು ನಿಮ್ಮ ತ್ವಚೆಯ ಬಣ್ಣವನ್ನೇ ಕುಗ್ಗಿಸುತ್ತದೆ. ಮೂಗಿನ ಮೇಲೆ, ಕೆನ್ನೆ ಹಾಗೂ ಕೆಲವೊಮ್ಮೆ ಹಣೆಯ ಮೇಲೆ ಕಾಣಿಸಿಕೊಳ್ಳುವ ಇವನ್ನು ಇಲ್ಲದಂತೆ ಮಾಡುವುದು ಸವಾಲಿನ ಕೆಲಸ.

ಮೂಗಿನ ತ್ವಚೆಯ ಮೇಲಿರುವ ರಂಧ್ರಗಳಲ್ಲಿ ಸೇರಿಕೊಳ್ಳುವ ಧೂಳು ಕೊಳೆ ಅಥವಾ ಸತ್ತ ಜೀವಕೋಶಗಳು ಕಪ್ಪಾಗಿ ಉದ್ದಕ್ಕೆ ಇರುತ್ತವೆ. ತ್ವಚೆಯ ಜಿಡ್ಡಿನಾಂಶವೂ ಇದರೊಂದಿಗೆ ಬೆರೆತುಕೊಳ್ಳುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಡವೆಯಂತೆ ಬ್ಲ್ಯಾಕ್ ಹೆಡ್ ಗಳನ್ನು ಯಾವುದೇ ಕಾರಣಕ್ಕೆ ಚಿವುಟಿ ತೆಗೆಯದಿರಿ. ಇದರಿಂದ ಮೇಲ್ಭಾಗ ಹೋಗುತ್ತದೆಯೇ ಹೊರತು ಒಳಭಾಗ ಹೊರಬರುವುದಿಲ್ಲ. ತುಂಡಾದ ಇದು ಒಳಗಿನಿಂದ ಮತ್ತಷ್ಟು ಆಳಕ್ಕೆ ಇಳಿದು ಹೆಚ್ಚಿನ ಬ್ಲ್ಯಾಕ್ ಹೆಡ್ ಹುಟ್ಟಲು ಕಾರಣವಾಗಬಹುದು.

ಮೊಟ್ಟೆಯ ಬಿಳಿ ಭಾಗದಿಂದ ಇದಕ್ಕೆ ಮದ್ದು ತಯಾರಿಸಬಹುದು. ಅದನ್ನು ಚೆನ್ನಾಗಿ ಕದಡಿ ನೊರೆ ಬಂದಾಗ ಅದಕ್ಕೆ ಜೇನುತುಪ್ಪ ಮತ್ತು ಲಿಂಬೆ ರಸ ಸೇರಿಸಿ. ಇದನ್ನು ಬ್ಲ್ಯಾಕ್ ಹೆಡ್ ಇರುವ ಜಾಗಕ್ಕೆ ದಪ್ಪನಾಗಿ ಹಚ್ಚಿ.

ಅರ್ಧ ಗಂಟೆ ಒಣಗಿದ ಬಳಿಕ ತಣ್ಣಗಿನ ನೀರಿನಲ್ಲಿ ನಾಲ್ಕಾರು ಬಾರಿ ಮುಖ ತೊಳೆಯಿರಿ. ಯಾವುದೇ ಸೋಪು ಬಳಸದಿರಿ. ಸೂಕ್ಷ್ಮ ತ್ವಚೆ ನಿಮ್ಮದಾಗಿದ್ದರೆ ಲಿಂಬೆ ಹಣ್ಣು ಬಳಸಬೇಕಿಲ್ಲ. ಕೇವಲ ಜೇನುತುಪ್ಪ ಹಚ್ಚಿದರೆ ಸಾಕು.

For Latest News Updates, Join Our Whatsapp Community🚩
RELATED ARTICLES

Most Popular