HomeEntertainmentಕನ್ನಡ ಸೇರಿದಂತೆ 9 ಭಾಷೆಗಳಲ್ಲಿ ND ಟಿವಿ ನ್ಯೂಸ್ ಆರಂಭಕ್ಕೆ ಸಿದ್ಧತೆ...!

ಕನ್ನಡ ಸೇರಿದಂತೆ 9 ಭಾಷೆಗಳಲ್ಲಿ ND ಟಿವಿ ನ್ಯೂಸ್ ಆರಂಭಕ್ಕೆ ಸಿದ್ಧತೆ…!

ಅದಾನಿ ಗ್ರೂಪ್ ಒಡೆತನದಲ್ಲಿರುವ ಎನ್.ಡಿ. ಟಿವಿ, ಕನ್ನಡವೂ ಸೇರಿದಂತೆ ಒಂಬತ್ತು ಪ್ರಾದೇಶಿಕ ಭಾಷೆಗಳಲ್ಲಿ ನ್ಯೂಸ್ ಚಾನೆಲ್ ಆರಂಭಕ್ಕೆ ಸಿದ್ಧತೆ ನಡೆಸಿದ್ದು, ಅನುಮತಿ ಕೋರಿ ಈಗಾಗಲೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಎನ್.ಡಿ. ಟಿವಿ, ಇಂಗ್ಲಿಷ್ ಮತ್ತು ಹಿಂದಿ ನ್ಯೂಸ್ ಚಾನೆಲ್ ಜೊತೆಗೆ ಬ್ಯುಸಿನೆಸ್ ನ್ಯೂಸ್ ಚಾನೆಲ್ ನಡೆಸುತ್ತಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಅನುಮತಿ ಸಿಕ್ಕ ಬಳಿಕ ಕನ್ನಡ, ತೆಲುಗು, ಮಲಯಾಳಂ, ಮರಾಠಿ ಸೇರಿದಂತೆ ಒಂಬತ್ತು ಪ್ರಾದೇಶಿಕ ಭಾಷೆಗಳಲ್ಲಿ ನ್ಯೂಸ್ ಚಾನೆಲ್ ಆರಂಭಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮೊದಲು ಎನ್‌.ಡಿ. ಟಿವಿಯ ಪ್ರಮೋಟರ್ ಗಳಾಗಿದ್ದ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಅವರ ಬಳಿ ಇದ್ದ ಶೇಕಡ 27.26ರಷ್ಟು ಷೇರುಗಳನ್ನು ಅದಾನಿ ಒಡೆತನದ ಕಂಪನಿ 2022ರ ಡಿಸೆಂಬರ್ ನಲ್ಲಿ ತನ್ನದಾಗಿಸಿಕೊಂಡಿತ್ತು. ಪ್ರಸ್ತುತ ಅದಾನಿ ಗ್ರೂಪ್ ಎನ್.ಡಿ. ಟಿವಿಯಲ್ಲಿ ಶೇಕಡ 64.71ರಷ್ಟು ಷೇರುಗಳನ್ನು ಹೊಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular