HomeIndiaಮಣಿಪುರ NDA ಸರ್ಕಾರ ರಚನೆ: ಹೈಕಮಾಂಡ್ ನಿಲುವೇನು?

ಮಣಿಪುರ NDA ಸರ್ಕಾರ ರಚನೆ: ಹೈಕಮಾಂಡ್ ನಿಲುವೇನು?

ಮಣಿಪುರದಲ್ಲಿ NDA ಸರ್ಕಾರ ರಚನೆ ಸುದ್ದಿಯ ಕಾರಣ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. 2025ರ ಫೆಬ್ರವರಿಯಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಇದೆ. ಬಿಜೆಪಿ ನಾಯಕರನ್ನು ಭೇಟಿಯಾಗಲು ಎನ್‌ಡಿಎ ಮೈತ್ರಿಕೂಟದ ಶಾಸಕರು ದೆಹಲಿಗೆ ಬಂದಿದ್ದು, ಬಿಜೆಪಿ ನಾಯಕರ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಭಾನುವಾರ ರಾತ್ರಿ 20 ಶಾಸಕರು ದೆಹಲಿಗೆ ಆಗಮಿಸಿದ್ದು. ಸೋಮವಾರ 6ಕ್ಕೂ ಅಧಿಕ ಶಾಸಕರು ಆಗಮಿಸಿದ್ದಾರೆ. ಇಂದು ರಾತ್ರಿ ಬಿಜೆಪಿಯ ಹೈಕಮಾಂಡ್ ನಾಯಕರು ಶಾಸಕರ ಜೊತೆ ಸಭೆ ನಡೆಸಲಿದ್ದಾರೆ. ರಾಷ್ಟ್ರಪತಿ ಆಳ್ವಿಕೆ ಫೆಬ್ರವರಿ 13ರಂದು ಅಂತ್ಯಗೊಳ್ಳಲಿದ್ದು, ಸರ್ಕಾರ ರಚನೆಯಾಗಲಿದೆಯೇ? ಕಾದು ನೋಡಬೇಕಿದೆ.

ಫೆಬ್ರವರಿ 13, 2025ರಂದು ಮೊದಲ ಬಾರಿಗೆ ಮಣಿಪುರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಯಿತು. ಬಳಿಕ ಅದನ್ನು  6 ತಿಂಗಳು ವಿಸ್ತರಣೆ ಮಾಡಲಾಯಿತು. ಈಗ ಆ ವಿಸ್ತರಣೆ ಅಂತ್ಯವಾಗುತ್ತಾ ಬಂದಿದ್ದು, ರಾಜ್ಯದಲ್ಲಿ ಸರ್ಕಾರ ರಚನೆಯಾಗುವ ಸೂಚನೆ ಸಿಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿರೋಧವಿದೆ: ಮಣಿಪುರದಲ್ಲಿ ಸರ್ಕಾರ ರಚನೆಗೆ ಪರಿಸ್ಥಿತಿ ಸಮರ್ಪಕವಾಗಿಲ್ಲ. ಕುಕಿ ಸಮುದಾಯದ ಕೆಲವು ಸಂಘಟನೆಗಳು ಸರ್ಕಾರ ರಚನೆ ವಿರೋಧಿಸುತ್ತಿವೆ. ಆದರೆ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳ್ಳುತ್ತಿರುವ ಕಾರಣ ಸರ್ಕಾರ ರಚನೆ ಮಾಡಬೇಕು ಇಲ್ಲವೇ ರಾಷ್ಟ್ರಪತಿ ಆಳ್ವಿಕೆ ಮುಂದುವರೆಸಬೇಕಿದೆ.

ಮಣಿಪುರ ಮಾಜಿ ಸಿಎಂ ಎನ್‌.ಬಿರೇನ್ ಸಿಂಗ್, ಸ್ಪೀಕರ್ ಸತ್ಯಬಾರ್ಥ ಸಿಂಗ್, ಮಾಜಿ ಸಚಿವ ವೈ.ಕೇಮಂದ್‌ ಚಂದ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷೆ ಎ.ಶಾರದಾ ದೇವಿ ಮುಂತಾದವರು ದೆಹಲಿಯಲ್ಲಿದ್ದಾರೆ.

ಬಿಜೆಪಿ ಹೈಕಮಾಂಡ್ ನಾಯಕರು ಮೊದಲು ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಶಾಸಕರಿಂದ ಅಭಿಪ್ರಾಯ ಸಂಗ್ರಹಣೆ ಮಾಡಲಿದ್ದಾರೆ. ಸರ್ಕಾರ ರಚನೆ ಮಾಡುವ ಪರಿಸ್ಥಿತಿ ಇದ್ದರೆ ಮುಂದಿನ ಬೆಳವಣಿಗೆ ಕುರಿತು ಚರ್ಚಿಸಲಿದ್ದಾರೆ.

ಮಣಿಪುರ ವಿಧಾನಸಭೆಯ ಸದಸ್ಯ ಬಲ 60. 2027ರಲ್ಲಿ ಸರ್ಕಾರದ ಅವಧಿ ಅಂತ್ಯಗೊಳ್ಳಲಿದೆ. ಒಂದು ವೇಳೆ ಪರಿಸ್ಥಿತಿ ಸಮರ್ಪಕವಾಗಿ ಇಲ್ಲವಾದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಮತ್ತೆ ಮುಂದುವರೆಸುವ ಕುರಿತು ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.

ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಎನ್‌ಪಿಎಫ್‌, ಎನ್‌ಪಿಪಿ ಮತ್ತು ಕೆಲವು ಪಕ್ಷೇತರ ಶಾಸಕರು ಇದ್ದಾರೆ. ಆದ್ದರಿಂದ ಎಲ್ಲರ ಅಭಿಪ್ರಾಯವನ್ನು ಪರಿಗಣಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಕುಕಿ ಸಮುದಾಯದ ಶಾಸಕರ ಜೊತೆ ಬಿಜೆಪಿ ನಾಯಕರು ಪ್ರತ್ಯೇಕ ಸಭೆಯನ್ನು ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಡಿಸೆಂಬರ್ 14, 2025ರಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿ ಶಾಸಕರ ಜೊತೆ ಸಭೆಯನ್ನು ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿದ್ದರು. ಬಳಿಕ ಈಗ ದೆಹಲಿಯಲ್ಲಿ ಸಭೆ ನಡೆಯುತ್ತಿದೆ.

ಕುಕಿ ಸಮುದಾಯದ ಶಾಸಕರು ಸರ್ಕಾರದ ಭಾಗವಾಗಲು ಒಪ್ಪಿಗೆ ನೀಡಿದ್ದಾರೆ. ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಬೇಕು, ಕೇಂದ್ರಾಡಳಿತ ಸ್ಥಾನಮಾನ ನೀಡಬೇಕು ಎಂಬುದು ಸೇರಿದಂತೆ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಮಣಿಪುರದಲ್ಲಿ ಬಿಜೆಪಿಯ 37 ಶಾಸಕರಿದ್ದಾರೆ. ಇವರಲ್ಲಿ 32 ಶಾಸಕರು 2022ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದವರು. ಜೆಡಿಯು ಪಕ್ಷದ 6 ಶಾಸಕರು ಗೆದ್ದಿದ್ದರು. ಚುನಾವಣೆ ಬಳಿಕ ಅವರು ಬಿಜೆಪಿ ಸೇರಿದ್ದಾರೆ.

ಎನ್‌ಪಿಪಿಯ 6, ಎನ್‌ಪಿಎಫ್‌ನ 5, 5 ಕಾಂಗ್ರೆಸ್, ಕೆಪಿಎ 2, 3 ಪಕ್ಷೇತರ ಶಾಸಕರಿದ್ದಾರೆ. ಒಬ್ಬ ಶಾಸಕರ ನಿಧನದ ಕಾರಣ ಒಂದು ಸೀಟು ಖಾಲಿ ಇದೆ. ತತ್‌ಕ್ಷಣಕ್ಕೆ ಹೊಸ ಸರ್ಕಾರ ರಚನೆ ಸಾಧ್ಯವಿಲ್ಲ. ಈ ಕುರಿತು ಲೋಕಸಭೆ, ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ.

ಈಗ ಶಾಸಕರ ಸಭೆಯಲ್ಲಿ ಸರ್ಕಾರ ರಚನೆಗೆ ಒಪ್ಪಿಗೆ ಸಿಕ್ಕಿದರೆ ಬಜೆಟ್ ಅಧಿವೇಶನದಲ್ಲಿಯೇ ಮಣಿಪುರದಲ್ಲಿ ಸರ್ಕಾರ ರಚನೆ ಮಾಡುವ ಕುರಿತು ಲೋಕಸಭೆ, ರಾಜ್ಯಸಭೆಯ ಒಪ್ಪಿಗೆ ಪಡೆಯಲು ಎನ್‌ಡಿಎ ನಾಯಕರು ಚಿಂತಿಸಿದ್ದಾರೆ. ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಾಗ ಇದ್ದ ಸರ್ಕಾರವನ್ನು ಅಮಾನತು ಮಾಡಲಾಗಿತ್ತು ಬಿಟ್ಟರೆ ವಿಧಾನಸಭೆ ವಿಸರ್ಜನೆ ಮಾಡಿರಲಿಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular