HomeLatest News'ಟಾಕ್ಸಿಕ್' ಟ್ರೇಲರ್ ಲಾಂಚ್‌ನಲ್ಲಿ ನಯನತಾರಾ ಮಿಂಚಿಂಗ್: ಯಶ್ ಕರೆಗೆ ಓಗೊಟ್ಟು ಬೆಂಗಳೂರಿಗೆ ಬಂದ ದಕ್ಷಿಣದ ಸ್ಟಾರ್...

‘ಟಾಕ್ಸಿಕ್’ ಟ್ರೇಲರ್ ಲಾಂಚ್‌ನಲ್ಲಿ ನಯನತಾರಾ ಮಿಂಚಿಂಗ್: ಯಶ್ ಕರೆಗೆ ಓಗೊಟ್ಟು ಬೆಂಗಳೂರಿಗೆ ಬಂದ ದಕ್ಷಿಣದ ಸ್ಟಾರ್ ನಟಿ

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಭವ್ಯ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದದ್ದು ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಉಪಸ್ಥಿತಿ. ಸಾಮಾನ್ಯವಾಗಿ ತಮ್ಮ ಸಿನಿಮಾಗಳ ಯಾವುದೇ ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸದ ನಯನತಾರಾ, ಈ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ್ದು ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿತ್ತು.

ತಮ್ಮ ಈ ನಿರ್ಧಾರದ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ ನಯನತಾರಾ, “ನನಗೆ ಸಿನಿಮಾ ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಷ್ಟವಿಲ್ಲ ಎಂದೇನೂ ಅಲ್ಲ. ಆದರೆ ನನಗೆ ಇಂತಹ ವೇದಿಕೆಗಳಲ್ಲಿ ಮಾತನಾಡಲು ಅಥವಾ ಪ್ರಚಾರ ಮಾಡಲು ಸರಿಯಾಗಿ ಬರುವುದಿಲ್ಲ, ಹಾಗಾಗಿ ನಾನು ಇವುಗಳಿಂದ ದೂರ ಉಳಿಯುತ್ತೇನೆ. ಆದರೆ ‘ಟಾಕ್ಸಿಕ್’ ಕಾರ್ಯಕ್ರಮ ನನಗೆ ಹಲವು ಕಾರಣಗಳಿಂದ ಅತ್ಯಂತ ವಿಶೇಷವಾಗಿದೆ. ಯಶ್ ಅವರು ಕೇವಲ ಒಂದು ಕರೆ ಮಾಡಿದರು, ಅವರ ಮಾತಿಗೆ ಗೌರವ ಕೊಟ್ಟು ನಾನು ಇಲ್ಲಿಗೆ ಬರಲೇಬೇಕಾಯಿತು” ಎಂದು ಸ್ಪಷ್ಟಪಡಿಸಿದರು.

ನಯನತಾರಾ ಅವರ ಈ ನಡೆ ‘ಟಾಕ್ಸಿಕ್’ ಸಿನಿಮಾ ಎಷ್ಟು ಅದ್ದೂರಿಯಾಗಿ ಮೂಡಿಬಂದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ದೊಡ್ಡ ಬಜೆಟ್ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಹುಮಾ ಕುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಆಗಸ್ಟ್ 26 ರಂದು ಜಗತ್ತಿನಾದ್ಯಂತ ಬೆಳ್ಳಿಪರದೆಗೆ ಅಪ್ಪಳಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular