HomeKarnatakaನಂಜನಗೂಡಿನ ಶ್ರೀಕಂಠೇಶ್ವರ ಜಾತ್ರೆ: ಭಕ್ತರಿಗಾಗಿ ವಿಶೇಷ ರೈಲುಗಳು

ನಂಜನಗೂಡಿನ ಶ್ರೀಕಂಠೇಶ್ವರ ಜಾತ್ರೆ: ಭಕ್ತರಿಗಾಗಿ ವಿಶೇಷ ರೈಲುಗಳು

ಭಾರತೀಯ ರೈಲ್ವೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಭಕ್ತರಿಗೆ ಸಿಹಿಸುದ್ದಿ ನೀಡಿದೆ. ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಜಾತ್ರೆ ಪ್ರಯುಕ್ತ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.

ಈ ಕುರಿತು ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.

ವಿ.ಸೋಮಣ್ಣ ತಮ್ಮ ಪೋಸ್ಟ್‌ನಲ್ಲಿ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಜರುಗಲಿರುವ ಪಂಚ ಮಹಾರಥೋತ್ಸವ (ದೊಡ್ಡ ಜಾತ್ರೆ) ನಿಮಿತ್ತವಾಗಿ, ಭಕ್ತರ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈಸೂರು-ನಂಜನಗೂಡು ನಡುವೆ (ರೈಲು ಸಂಖ್ಯೆ 06225) ಹಾಗೂ ನಂಜನಗೂಡು-ಮೈಸೂರು ನಡುವೆ (ರೈಲು ಸಂಖ್ಯೆ 06226) ಮಾರ್ಚ್‌ 30ರಿಂದ ಏಪ್ರಿಲ್‌ 3ರ ತನಕ ಸಂಚಾರ ನಡೆಸಲಿವೆ ಎಂದು ತಿಳಿಸಿದ್ದಾರೆ.

ಇದು ಕಾಯ್ದಿರಿಸದ ವಿಶೇಷ ರೈಲಾಗಿದ್ದು, ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಎರಡೂ ರೈಲುಗಳು ತಲಾ 5 ಟ್ರಿಪ್‌ ಸಂಚಾರ ಮಾಡಲಿವೆ. ಭಕ್ತಾಧಿಗಳು ಭಾರತೀಯ ರೈಲ್ವೆಯ ಈ ಸೇವೆಯನ್ನು ಸದುಪಯೋಗ ಪಡಿಸಿಕೊಂಡು, ಶ್ರೀಕಂಠೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಆಶಿಸುತ್ತೇನೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ರೈಲು ಪುನರ್ ಆರಂಭ, ಭಾಗಶಃ ರದ್ದು: ಮೈಸೂರು ಮತ್ತು ಮೈಸೂರು ನ್ಯೂ ಗುಡ್ಸ್ ಟರ್ಮಿನಲ್ ಬೈಪಾಸ್‌ ನಡುವೆ ನಡೆಯುತ್ತಿರುವ ರಸ್ತೆ ಕೆಳಸೇತುವೆ ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ, ಕೆಲವು ರೈಲು ಸೇವೆಗಳ ಪುನರ್ ಆರಂಭ ಹಾಗೂ ಭಾಗಶಃರದ್ದು ಪಡಿಸುವುದಾಗಿ ತಿಳಿಸಿದೆ.

ಹಿಂದೆ ಭಾಗಶಃ ರದ್ದು ಪಡಿಸಲಾಗಿದ್ದ ರೈಲುಗಳ ಪುನರ್ ಆರಂಭ. 2026 ಮಾರ್ಚ್ 21 ಮತ್ತು 24ರಂದು ಭಾಗಶಃ ರದ್ದುಪಡಿಸಲಾಗಿದ್ದು ಕೆಳಗಿನ ರೈಲುಗಳು ಈಗ ತಮ್ಮ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ.

ರೈಲು ಸಂಖ್ಯೆ 56267 ಅರಸೀಕೆರೆ. ಮೈಸೂರು ಪ್ಯಾಸೆಂಜರ್ ಬೆಳಗುಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗಿದ್ದ ಈ ರೈಲು ಮರು ಆರಂಭವಾಗಿದ್ದು ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.

ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದು ಪಡಿಸಲಾಗಿದ್ದ ಈ ರೈಲು ಮರು ಆರಂಭವಾಗಿದ್ದು, ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.

ರೈಲುಗಳ ಭಾಗಶಃ ರದ್ದು: ರಸ್ತೆ ಕೆಳಸೇತುವೆ ಕಾಮಗಾರಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೆಳಗಿನ ರೈಲುಗಳು 2026 ಮಾರ್ಚ್ 28 ಮತ್ತು 31 ರಂದು ಭಾಗಶಃ ರದ್ದುಪಡಿಸಲಾಗುವುದು.

ರೈಲು ಸಂಖ್ಯೆ 56267 ಅರಸೀಕರೆ-ಮೈಸೂರು ಪ್ಯಾಸೆಂಜರ್ ಬೆಳಗುಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ ಹಾಗೂ ಬೆಳಗುಳದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

ರೈಲು ಸಂಖ್ಯೆ 16225 ಮೈಸೂರು- ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ ಹಾಗೂ ಮೈಸೂರು ಬದಲಿಗೆ ಬೆಳಗುಳದಿಂದ ತನ್ನ ಪ್ರಯಾಣ ಆರಂಭಿಸಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular