ನಂಜನಗೂಡು: ಪೂಜೆ ವೇಳೆಯೇ ಅರ್ಚಕರೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವ ಘೋರ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ಅರ್ಚಕ ಉಪಾಧ್ಯಾಯ ಮೃತ ದುರ್ದೈವಿ. ಪ್ರತಿ ವರ್ಶದಂತೆ ಈವರ್ಷವೂ ನಂಜನಗೂಡಿನಲ್ಲಿ ಅಂಧಕಾಸುರ ವಧೆ ಪೂಜೆ ನೆರವೇರುತ್ತಿತ್ತು. ಈ ವೇಳೆ ಅರ್ಚಕ ಉಪಾಧ್ಯಾಯ ಏಕಾಏಕಿ ಕುಸಿದು ಬಿದ್ದವರು ಮೇಲೇಳಲೇ ಇಲ್ಲ. ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಹೃದಯಾಘಾತದಿಂದ ಮೃತಪಟ್ತಿರುವ ಶಂಕೆ ವ್ಯಕ್ತವಾಗಿದೆ. ಅರ್ಚಕ ಕುಸಿದು ಬಿದ್ದು ಸಾವನ್ನಪ್ಪಿರುವ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

