HomeEntertainment34ನೇ ವಸಂತಕ್ಕೆ ಕಾಲಿಟ್ಟ ನಟಿ ‘ನಂದ ಲವ್ಸ್​ ನಂದಿತಾ’ ಖ್ಯಾತಿಯ ನಂದಿತಾ ಶ್ವೇತಾ

34ನೇ ವಸಂತಕ್ಕೆ ಕಾಲಿಟ್ಟ ನಟಿ ‘ನಂದ ಲವ್ಸ್​ ನಂದಿತಾ’ ಖ್ಯಾತಿಯ ನಂದಿತಾ ಶ್ವೇತಾ

ತೆಲುಗು ಮತ್ತು ತಮಿಳು ಚಿತ್ರರಂಗದ ಬೇಡಿಕೆ ನಟಿ ನಂದಿತಾ ಶ್ವೇತ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

2007ರಲ್ಲಿ ತೆರೆ ಕಂಡ ಲೂಸ್ ಮಾದ ಯೋಗಿ ಅಭಿನಯದ ನಂದ ಲವ್ಸ್ ನಂದಿತ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. 2012ರಲ್ಲಿ ಅಟ್ಟಕತಿ ಎಂಬ ತಮಿಳು ಚಿತ್ರದಲ್ಲಿ ನಟಿಸುವ ಮೂಲಕ ಅಲ್ಲಿಯೂ ಭರ್ಜರಿ ಯಶಸ್ಸು ಕಂಡರು ಬಳಿಕ ಕನ್ನಡ ಚಿತ್ರರಂಗದಿಂದ ದೂರ ಉಳಿದರು.

ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ನಂದಿತಾ ಕಳೆದ ವರ್ಷ ‘ರಥಂ’ ಮತ್ತು ತೆಲುಗಿನ ‘ಮಂಗಳವಾರಂ’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಇತ್ತೀಚಿಗೆ ‘ರಾ ರಾ ಪೆನಿಮಿಟಿ’ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ ಇಂದು ಸೋಶಿಯಲ್ ಮೀಡಿಯಾದಲ್ಲಿ  ನಂದಿತಾ ಶ್ವೇತಾ ಅವರಿಗೆ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular