BIG NEWS: ‘ನನ್ನ ಮಣ್ಣು – ನನ್ನ ದೇಶ’ ಅಭಿಯಾನಕ್ಕೆ ದೇಶದಾದ್ಯಂತ ಇಂದು ಚಾಲನೆ

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸ್ಮರಣಾರ್ಥ ಕೇಂದ್ರ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿರುವ ನನ್ನ ಮಣ್ಣು – ನನ್ನ ದೇಶ (ಮೇರಿ ಮಾಟಿ ಮೇರಾ ದೇಶ್) ಅಭಿಯಾನಕ್ಕೆ ದೇಶದಾದ್ಯಂತ ಇಂದು ಚಾಲನೆ ಸಿಗಲಿದೆ

ಹಳ್ಳಿಯಿಂದ ದಿಲ್ಲಿಯವರೆಗೆ ಎಂಬ ಪರಿಕಲ್ಪನೆ ಅಡಿ ಈ ಅಭಿಯಾನಕ್ಕೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಕಲ ಸಿದ್ಧತೆ ನಡೆಸಿದ್ದು, ಇಂದಿನಿಂದ ಆಗಸ್ಟ್ 30ರವರೆಗೆ ಎರಡು ಹಂತಗಳಲ್ಲಿ ಈ ಅಭಿಯಾನ ನಡೆಯಲಿದೆ.

ಹುತಾತ್ಮ ಯೋಧರ ಸ್ಮರಣಾರ್ಥವಾಗಿ ದೇಶದ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಾಸನ ಸ್ಥಾಪಿಸುವುದರ ಜೊತೆಗೆ ಅಭಿಯಾನದ ವೇಳೆ ‘ಅಮೃತ ಕಲಶ’ ಯಾತ್ರೆಯನ್ನೂ ಸಹ ಕೈಗೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶದ ನಾನಾ ಮೂಲೆಗಳಿಂದ 7,500 ಕಲಶಗಳಲ್ಲಿ ಮಣ್ಣು ಹಾಗೂ ಸಸಿಗಳನ್ನು ಸಂಗ್ರಹಿಸಿ ಆಗಸ್ಟ್ 30ರ ವೇಳೆಗೆ ದೆಹಲಿಯಲ್ಲಿ ತಲುಪುವುದರ ಮೂಲಕ ಅಭಿಯಾನ ಅಂತ್ಯಗೊಳ್ಳಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read