HomeKarnatakaಪ್ರಯಾಣಿಕರ ಗಮನಕ್ಕೆ... ಈ ಮಾರ್ಗದಲ್ಲಿ ಮೂರು ದಿನ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ… ಈ ಮಾರ್ಗದಲ್ಲಿ ಮೂರು ದಿನ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ಇಂದಿನಿಂದ ಆಗಸ್ಟ್ 14ರವರೆಗೆ ನಮ್ಮ ಮೆಟ್ರೋ ಸಂಚಾರದ ಕೆಲ ಮಾರ್ಗಗಳಲ್ಲಿ ವ್ಯತ್ಯವಾಗಲಿದೆ. ಸಿಗ್ನಲ್, ಟರ್ಮಿನಲ್ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ವ್ಯತ್ಯವಯಾಗಲಿದೆ.

ಬೈಯ್ಯಪ್ಪನಹಳ್ಳಿ ಟರ್ಮಿನಲ್ ನಿಂದ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ, ಕೃಷ್ಣರಾಜಪುರ, ವೈಟ್ ಫೀಲ್ಡ್ ವರೆಗೆ ಮೆಟ್ರೋ ಸಂಚಾರ ವಿಸ್ತರಿತ ಮಾರ್ಗದಲ್ಲಿ ಸಿಗ್ನಲ್ ಸೇರಿದಂತೆ ಇತರ ಕಾಮಗರಿಗಳು ನಡೆಯಲಿವೆ. ಬೈಯ್ಯಪ್ಪನಹಳ್ಳಿಯವರೆಗೆ ಎಂದಿನಂತೆ ಮೆಟ್ರೋ ರೈಲುಗಳು ಸಂಚರಿಸಲಿದ್ದು, ಅಲ್ಲಿಂದ ಮುಂದಕ್ಕೆ ವೈಟ್ ಫೀಲ್ಡ್ ವರೆಗೆ ಸಂಚಾರ ವ್ಯತ್ಯವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಭಾಗದಲ್ಲಿ ಬೆಳಿಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ.

ಇನ್ನು ಕೆಂಗೇರಿ ನಿಲ್ದಾಣದಿಂದ ಚೆಲ್ಲಘಟ್ಟ ನಿಲ್ದಾಣದವರೆಗೆ ಆಗಸ್ಟ್ 14ರಂದು ಬೆಳಿಗ್ಗೆ 5 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಬಿಎಂಆರ್ ಸಿ ಎಲ್ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular