HomeKarnatakaಬೆಳ್ಳಂಬೆಳಗ್ಗೆ ಕೈಕೊಟ್ಟ ‘ನಮ್ಮ ಮೆಟ್ರೋ’: ಸಿಗ್ನಲ್ ಸಮಸ್ಯೆಯಿಂದ ಒಂದು ಗಂಟೆ ಸಂಚಾರ ಸ್ಥಗಿತ

ಬೆಳ್ಳಂಬೆಳಗ್ಗೆ ಕೈಕೊಟ್ಟ ‘ನಮ್ಮ ಮೆಟ್ರೋ’: ಸಿಗ್ನಲ್ ಸಮಸ್ಯೆಯಿಂದ ಒಂದು ಗಂಟೆ ಸಂಚಾರ ಸ್ಥಗಿತ

ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಬೆಳ್ಳಂಬೆಳಗ್ಗೆ ಕೈಕೊಟ್ಟಿದೆ. ಬೈಯಪ್ಪನಹಳ್ಳಿ ಗರುಡಾಚಾರ್ಯಪಾಳ್ಯ ಬಳಿ ಸಿಗ್ನಲ್ ವೈಫಲ್ಯದಿಂದಾಗಿ ಮೆಟ್ರೋ ಸಂಚಾರ ವ್ಯತ್ಯಯವಾಗಿದೆ.

ಒಂದು ಗಂಟೆ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಬೆಳಗ್ಗೆ 6.40 ರಿಂದ 7:40 ರವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸದ್ಯ ಮೆಟ್ರೋ ಸಂಚಾರ ಯಥಾಸ್ಥಿತಿಗೆ ಮರಳಿದೆ. ಸಿಗ್ನಲ್ ಸಮಸ್ಯೆ ಕಾರಣ ಮೆಟ್ರೋ ಸೇವೆಯಲ್ಲಿ 1 ಗಂಟೆ ವ್ಯತ್ಯಯವಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಸದ್ಯ ನೇರಳೆ ಮಾರ್ಗದಲ್ಲಿ ಸಂಚಾರ ಆರಂಭವಾಗಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular