HomeKarnatakaಇದ್ದಕ್ಕಿದ್ದಂತೆ ಕೆಟ್ಟುನಿಂತ ನಮ್ಮ ಮೆಟ್ರೋ: ಡೋರ್ ಲಾಕ್ ಆಗಿ ಪ್ರಯಾಣಿಕರ ಪರದಾಟ

ಇದ್ದಕ್ಕಿದ್ದಂತೆ ಕೆಟ್ಟುನಿಂತ ನಮ್ಮ ಮೆಟ್ರೋ: ಡೋರ್ ಲಾಕ್ ಆಗಿ ಪ್ರಯಾಣಿಕರ ಪರದಾಟ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಆಗಾಗ ತಾಂತ್ರಿಕ ಸಮಸ್ಯೆಗಳು ಹೆಚ್ಚುತ್ತಿವೆ. ನೇರಳೆ ಮಾರ್ಗದ ಮೆಟ್ರೋ ರೈಲು ಏಕಾಏಕಿ ಕೆಟ್ಟುನಿಂತ ಘಟನೆ ಟ್ರಿನಿಟಿ ನಿಲ್ದಾಣದ ಬಳಿ ನಡೆದಿದೆ.

ತಾಂತ್ರಿಕ ದೋಷದಿಂದಾಗಿ ಮೆಟ್ರೋ ರೈಲು ನಿಂತು ಬಿಟ್ಟಿದೆ. ಬೆಳಿಗ್ಗೆ ಸುಮಾರು 9:58ರ ವೇಳೆ ಈ ಘಟನೆ ನಡೆದಿದೆ. ಪ್ರಯಾಣಿಕರು ಇನ್ನೇನು ಮೆಟ್ರೋದಿಂದ ಇಳಿಯಬೇಕು ಎನ್ನುವಷ್ಟರಲ್ಲೇ ಡೋರ್ ಲಾಕ್ ಆಗಿದೆ. ಪ್ರಯಾಣಿಕರು ಬೋಗಿಯೊಳಗೇ ಪರದಾಡಿದ್ದಾರೆ.

ಗಂಟೆಗಟ್ಟಲೆ ಕಾದರೂ ಮೆಟ್ರೋ ಡೋರ್ ಓಪನ್ ಮಾಡಲು ಆಗಿಲ್ಲ. ಬಳಿಕ ಮೆಟ್ರೋ ಬೋಗಿಯನ್ನು ಮೆಜೆಸ್ಟಿಕ್ ಟ್ರ್ಯಾಕ್ ಗೆ ಶಿಫ್ಟ್ ಮಾಡಿ ಮೆಟ್ರೋ ಇಂಜಿನಿಯರ್ ಗಳನ್ನು ಕರೆಸಿ ಲಾಕ್ ಆಗಿದ್ದ ಡೋರ್ ಓಪನ್ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ಮೆಟ್ರೋ ಸಂಚಾರ ಸಹಜಸ್ಥಿತಿಗೆ ಬಂದಿದ್ದು, ಮೆಟ್ರೋ ಪ್ರಯಾಣಿಕರಿಗೆ ಅಡಚಣಿ ಉಂಟಾದ ಕಾರಣಕ್ಕೆ ಬಿಎಂಆರ್ ಸಿ ಎಲ್ ವಿಷಾದ ವ್ಯಕ್ತಪಡಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular