ಬೆಂಗಳೂರು: ಭಾರತದಲ್ಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು ಕೇವಲ ಗುರುತಿನ ಚೀಟಿಗಳಲ್ಲ, ಅವು ನಮ್ಮ ದೈನಂದಿನ ಹಣಕಾಸು ಮತ್ತು ಅಧಿಕೃತ ವ್ಯವಹಾರಗಳ ಬೆನ್ನೆಲುಬು. ಮದುವೆಯ ನಂತರ ಅನೇಕ ಮಹಿಳೆಯರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲು ಬಯಸುತ್ತಾರೆ. ಆದರೆ ದಾಖಲೆಗಳಲ್ಲಿ ಹೆಸರು ಅಪ್‌ಡೇಟ್ ಮಾಡುವುದು ಹೇಗೆ ಎಂಬ ಗೊಂದಲ ಅನೇಕರಲ್ಲಿದೆ. ಚಿಂತಿಸಬೇಡಿ, ಸರಳ ಹಂತಗಳಲ್ಲಿ ಮನೆಯಲ್ಲೇ ಕುಳಿತು ಇದನ್ನು ಮಾಡುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.
ಆಧಾರ್ ಕಾರ್ಡ್‌ನಲ್ಲಿ ಹೆಸರು ಬದಲಾಯಿಸುವುದು ಹೇಗೆ?
ಆಧಾರ್‌ನಲ್ಲಿ ಹೆಸರು ಅಥವಾ ವಿಳಾಸ ಬದಲಾಯಿಸಲು ನೀವು ಆನ್‌ಲೈನ್ ಅಥವಾ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬಹುದು.
ಬೇಕಾಗುವ ದಾಖಲೆಗಳು: ಮದುವೆ ಪ್ರಮಾಣಪತ್ರ (Marriage Certificate) ಅಥವಾ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಭಾವಚಿತ್ರವಿರುವ ಗುರುತಿನ ಪತ್ರ.
ಆನ್‌ಲೈನ್ ಪ್ರಕ್ರಿಯೆ:
UIDAI ಅಧಿಕೃತ ವೆಬ್‌ಸೈಟ್‌ಗೆ (myaadhaar.uidai.gov.in) ಭೇಟಿ ನೀಡಿ.
ನಿಮ್ಮ ಆಧಾರ್ ಸಂಖ್ಯೆ ಮತ್ತು OTP ಬಳಸಿ ಲಾಗಿನ್ ಆಗಿ.
‘Address Update’ ಅಥವಾ ‘Name Update’ ಆಯ್ಕೆಯನ್ನು ಆರಿಸಿ (ಪ್ರಸ್ತುತ ಹೆಸರಿನ ಬದಲಾವಣೆಗೆ ಆಫ್‌ಲೈನ್ ಕೇಂದ್ರಗಳು ಹೆಚ್ಚು ಸೂಕ್ತ).
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು 50 ರೂ. ಶುಲ್ಕ ಪಾವತಿಸಿ.
ಆಫ್‌ಲೈನ್ ಪ್ರಕ್ರಿಯೆ: ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ, ಬಯೋಮೆಟ್ರಿಕ್ ನೀಡಿ ಹೆಸರು ಬದಲಾಯಿಸಬಹುದು.
ಪ್ಯಾನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ?
ಪ್ಯಾನ್ ಕಾರ್ಡ್ ವಿವರಗಳನ್ನು ಅಪ್‌ಡೇಟ್ ಮಾಡಲು ಎನ್‌ಎಸ್‌ಡಿಎಲ್ (NSDL-Protean) ಅಥವಾ ಯುಟಿಐಐಟಿಎಸ್ಎಲ್ (UTIITSL) ಪೋರ್ಟಲ್‌ಗಳನ್ನು ಬಳಸಬಹುದು.
ಅಪ್ಲಿಕೇಶನ್ ಟೈಪ್: ವೆಬ್‌ಸೈಟ್‌ಗೆ ಭೇಟಿ ನೀಡಿ Changes/Correction in PAN ಆಯ್ಕೆಯನ್ನು ಆರಿಸಿ.
ಟೋಕನ್ ಸಂಖ್ಯೆ: ನಿಮ್ಮ ಪ್ಯಾನ್ ಸಂಖ್ಯೆ, ಹೆಸರು ಮತ್ತು ಇಮೇಲ್ ಐಡಿ ನೀಡಿದಾಗ 15 ಅಂಕಿಯ ಟೋಕನ್ ಸಂಖ್ಯೆ ದೊರೆಯುತ್ತದೆ. ಇದನ್ನು ನೋಟ್ ಮಾಡಿಕೊಳ್ಳಿ.
ಮಾಹಿತಿ ಭರ್ತಿ: ನೀವು ಬದಲಾಯಿಸಲು ಬಯಸುವ ಸರಿಯಾದ ಹೆಸರು ಮತ್ತು ಅಗತ್ಯ ವಿವರಗಳನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಿ.
ದಾಖಲೆ ಮತ್ತು ಭಾವಚಿತ್ರ: ಗುರುತಿನ ಚೀಟಿ, ವಿಳಾಸದ ಪುರಾವೆ, ನಿಮ್ಮ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ಶುಲ್ಕ ಮತ್ತು ಸ್ಲಿಪ್: ನಿಗದಿತ ಶುಲ್ಕ ಪಾವತಿಸಿದ ನಂತರ ಫಾರ್ಮ್ ಸಬ್ಮಿಟ್ ಮಾಡಿ. ಕೊನೆಯಲ್ಲಿ ಸಿಗುವ ‘ಅಕ್ನಾಲೆಡ್ಜ್‌ಮೆಂಟ್ ಸ್ಲಿಪ್’ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇದು ಅರ್ಜಿಯ ಸ್ಥಿತಿ ತಿಳಿಯಲು ನೆರವಾಗುತ್ತದೆ.

