HomeKarnatakaBIG NEWS: ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟದ ಬಣ್ಣ; ಕನ್ನಡ ಪರ ಸಂಘಟನೆಗಳ ಆಕ್ರೋಶ

BIG NEWS: ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟದ ಬಣ್ಣ; ಕನ್ನಡ ಪರ ಸಂಘಟನೆಗಳ ಆಕ್ರೋಶ

ಮೈಸೂರು: ಮೊಹಮ್ಮದ್ ನಲಪಾಡ್ ಹೋಟೆಲ್ ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟ ಬಣ್ಣ ಬಳಿಯಲಾಗಿದ್ದು, ಪ್ರತಿಭಟನೆಯ ಎಚ್ಚರಿಕೆ ನೀಡಿವೆ.

ಮೈಸೂರಿನ ಹೈವೆ ಸರ್ಕಲ್ ನಲ್ಲಿರುವ ನಲಪಾಡ್ ಹೋಟೆಲ್ ಮುಂಭಾಗದ ಮೆಟ್ಟಿಲುಗಳಿಗೆ ಕನ್ನಡ ಬಾವುಟಗಳ ಬಣ್ಣ ಬಳಿಯಲಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹೋಟೆಲ್ ಮುಂದೆ ಜಮಾಯಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಕ್ಷಣ ಬೇರೆ ಬಣ್ಣ ಹಚ್ಚುವಂತೆ ಆಗ್ರಹಿಸಿದ್ದಾರೆ. ಇಲ್ಲವಾದರೇ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular