HomeKarnatakaಮೈಸೂರಿನಲ್ಲಿ ರಕ್ತ ಹೆಪ್ಪುಗಟ್ಟುವಂತೆ ವಿದ್ಯಾರ್ಥಿ ಕಣ್ಣಿಗೆ ಪಂಚ್ ಕೊಟ್ಟ ಶಿಕ್ಷಕ.! FIR ದಾಖಲು

ಮೈಸೂರಿನಲ್ಲಿ ರಕ್ತ ಹೆಪ್ಪುಗಟ್ಟುವಂತೆ ವಿದ್ಯಾರ್ಥಿ ಕಣ್ಣಿಗೆ ಪಂಚ್ ಕೊಟ್ಟ ಶಿಕ್ಷಕ.! FIR ದಾಖಲು

ಮೈಸೂರು: 16 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಮೈಸೂರಿನಲ್ಲಿ ಕೇಳಿಬಂದಿದೆ. ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರು ವಿದ್ಯಾರ್ಥಿಯ ಕಣ್ಣಿನ ಭಾಗಕ್ಕೆ ಪಂಚ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಎಫ್ ಐ ಆರ್ ದಾಖಲಾಗಿದೆ.

ಕಣ್ಣಿನ ಭಾಗಕ್ಕೆ ಪಂಚ್‌ ಕೊಟ್ಟ ಆರೋಪ

ಮೈಸೂರಿನ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, 16 ವರ್ಷದ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಕಣ್ಣಿನ ಭಾಗಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ವಿದ್ಯಾರ್ಥಿಗೆ ಗಾಯವಾಗಿದ್ದು, ಘಟನೆ ಬಳಿಕ ಆತ ಮನೆಯವರಿಗೆ ವಿಷಯ ತಿಳಿಸಿದ್ದಾನೆ ಎನ್ನಲಾಗಿದೆ.

ಯಾರಿಗಾದರೂ ಹೇಳಿದರೆ ಟಿಸಿ ಬೆದರಿಕೆ

ಘಟನೆ ಬಗ್ಗೆ ಶಾಲೆಯಲ್ಲಿ ಅಥವಾ ಹೊರಗೆ ಯಾರಿಗಾದರೂ ಮಾಹಿತಿ ನೀಡಿದರೆ ಟಿಸಿ ಕೊಟ್ಟು ಶಾಲೆಯಿಂದ ಕಳುಹಿಸುವುದಾಗಿ ಶಿಕ್ಷಕರು ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿಯ ಕುಟುಂಬ ಆರೋಪಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಂದೆಯಿಂದ ದೂರು

ವಿದ್ಯಾರ್ಥಿಯ ತಂದೆ ವಾಸಿಮ್ ಷರೀಫ್ ಅವರು ಘಟನೆ ಕುರಿತು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಶಿಕ್ಷಕರ ವಿರುದ್ಧ ಮಾಡಿರುವ ಹಲ್ಲೆ ಮತ್ತು ಬೆದರಿಕೆ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯ ಬಳಿಕ ಪ್ರಕರಣದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ.

ಬಳ್ಳಾರಿ ; ಸೆ.08 ರಂದು ರೆಡ್ ರನ್ ಕಾರ್ಯಕ್ರಮ

ಬಳ್ಳಾರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ ನಿಯಂತ್ರಣ ಮತ್ತು ನಿರ್ವಾಹಕ ಘಟಕದ ವತಿಯಿಂದ ಸೆಪ್ಟೆಂಬರ್ 08 ರಂದು ಬೆಳಿಗ್ಗೆ 07 ಗಂಟೆಗೆ ರೆಡ್ ರನ್ (ಮ್ಯಾರಥಾನ್) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2026-27 ನೇ ಸಾಲಿನ ರೆಡ್ ರನ್ (ಮ್ಯಾರಥಾನ್) ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದ ಸ್ಪರ್ದೆಯನ್ನು 17 ರಿಂದ 25 ವರ್ಷದೊಳಗಿನ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿ ಹಾಗೂ ವಿರ್ದ್ಯಾನಿಯರಿಗೆ 5 ಕಿ.ಮಿ ಓಟದ ಸ್ಪರ್ದೆಯನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಪ್ರಥಮ ಬಹುಮಾನ 10,000 ರೂ. ದ್ವಿತೀಯ 7000 ರೂ. ತೃತೀಯ 5000 ರೂ. ಬಹುಮಾನ ನೀಡಲಾಗುವುದು.

ಸ್ಪರ್ದೆ ನಡೆಯುವ ಮಾರ್ಗ:- ಸಂಗಮ್ ಸರ್ಕಲ್‌ದಿಂದ ಪ್ರಾರಭಂವಾಗಿ ಎಸ್‌ಎನ್ ಪೇಟೆ ಮೇಲು ಸೇತುವೆ-ಕೆಇಬಿ-ಚನ್ನಬಸಪ್ಪ ಲೇಔಟ್ ಎದುರಗಡೆ ಇರುವ ಭರತ್ ಪೆಟ್ರೊಲ್ ಬಂಕ್ ರವರೆಗೆ (ಮೋಕಾ ರಸ್ತೆ) ತಲುಪಿ ಮುಕ್ತಾಯವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅಥವಾ ದೂ:08392-279500 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಪಿಂಚಣಿ ಅದಾಲತ್

ಬಳ್ಳಾರಿ : ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ ಪಿಂಚಣಿದಾರರ ಕುಂದು ಕೊರತೆ ಆಲಿಸಿ, ಪರಿಹರಿಸಲು ಸೆಪ್ಟೆಂಬರ್ 15 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ನಗರದ ಪ್ರಾದೇಶಿಕ ಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಬಳ್ಳಾರಿ, ವಿಜಯನಗರ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ಪಿಂಚಣಿದಾರರು ತಮ್ಮ ಕುಂದುಕೊರತೆಗಳಿದ್ದಲ್ಲಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಪತ್ರ ಅಥವಾ ಇ-ಮೇಲ್ ಮೂಲಕ ಪಿ.ಪಿ.ಒ ಸಂಖ್ಯೆ, ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ ಮತ್ತು ಕುಂದು ಕೊರತೆಯ ಸ್ವರೂಪ ಹಾಗೂ ಇತ್ಯಾದಿಗಳನ್ನು ಅಂಚೆ ಪತ್ರದ ಮೂಲಕ ಸೆಪ್ಟೆಂಬರ್ 10 ರೊಳಗಾಗಿ ರವಾನಿಸಬಹುದಾಗಿದೆ. ಪತ್ರ ಲಕೋಟೆ ಮೇಲೆ ಪಿಂಚಣಿ ಅದಾಲತ್ ಎಂದು ಬರೆಯಬೇಕು.

ಹೆಚ್ಚಿನ ಮಾಹಿತಿಗಾಗಿ ದೂ.08392-268943 ಗೆ ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕೆ.ವಿ ಪ್ರವೀಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular