ಮೈಸೂರು/ಬೆಂಗಳೂರು: ಪ್ರಸಿದ್ಧ ಓಣಂ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅತಿಯಾದ ದಟ್ಟಣೆಯನ್ನು ನಿವಾರಿಸಲು ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆ ಮೈಸೂರು–ಕಣ್ಣೂರು–ಬೆಂಗಳೂರು ದಂಡು ನಡುವೆ ತಲಾ ಎರಡು ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ವಿಶೇಷ ರೈಲುಗಳ ಸಂಚಾರ ವೇಳಾಪಟ್ಟಿ:
ಮೈಸೂರು – ಕಣ್ಣೂರು – ಬೆಂಗಳೂರು ದಂಡು (ಮೊದಲ ಟ್ರಿಪ್)
ರೈಲು ಸಂಖ್ಯೆ 06227 (ಮೈಸೂರು – ಕಣ್ಣೂರು): ದಿನಾಂಕ 25.08.2026 (ಮಂಗಳವಾರ) ರಂದು ರಾತ್ರಿ 22:30 ಗಂಟೆಗೆ ಮೈಸೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 14:00 ಗಂಟೆಗೆ ಕಣ್ಣೂರು ತಲುಪಲಿದೆ.
ರೈಲು ಸಂಖ್ಯೆ 06228 (ಕಣ್ಣೂರು – ಬೆಂಗಳೂರು ದಂಡು): ದಿನಾಂಕ 26.08.2026 (ಬುಧವಾರ) ರಂದು ಸಂಜೆ 18:25 ಗಂಟೆಗೆ ಕಣ್ಣೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 08:35 ಗಂಟೆಗೆ ಬೆಂಗಳೂರು ದಂಡು ನಿಲ್ದಾಣ ತಲುಪಲಿದೆ.
ಮೈಸೂರು – ಕಣ್ಣೂರು – ಬೆಂಗಳೂರು ದಂಡು (ಎರಡನೇ ಟ್ರಿಪ್)
ರೈಲು ಸಂಖ್ಯೆ 06229 (ಮೈಸೂರು – ಕಣ್ಣೂರು): ದಿನಾಂಕ 29.08.2026 (ಶನಿವಾರ) ರಂದು ರಾತ್ರಿ 23:55 ಗಂಟೆಗೆ ಮೈಸೂರಿನಿಂದ ಹೊರಟು, ಮರುದಿನ ಸಂಜೆ 17:50 ಗಂಟೆಗೆ ಕಣ್ಣೂರು ತಲುಪಲಿದೆ.
ರೈಲು ಸಂಖ್ಯೆ 06230 (ಕಣ್ಣೂರು – ಬೆಂಗಳೂರು ದಂಡು): ದಿನಾಂಕ 30.08.2026 (ಭಾನುವಾರ) ರಂದು ಸಂಜೆ 19:45 ಗಂಟೆಗೆ ಕಣ್ಣೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 10:00 ಗಂಟೆಗೆ ಬೆಂಗಳೂರು ದಂಡು ನಿಲ್ದಾಣವನ್ನು ತಲುಪಲಿದೆ.

ಪ್ರಮುಖ ನಿಲುಗಡೆಗಳು :
ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಮಂಡ್ಯ, ಕೆಎಸ್‌ಆರ್ ಬೆಂಗಳೂರು (KSR Bengaluru), ಕೃಷ್ಣರಾಜಪುರಂ, ಬಂಗಾರಪೇಟೆ ಜಂಕ್ಷನ್, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪೂರು, ಪೊದನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಶೋರನೂರು ಜಂಕ್ಷನ್, ತಿರೂರು, ಕೋಝಿಕ್ಕೋಡ್, ವಡಕರ ಮತ್ತು ತಲಶ್ಶೇರಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.
ಬೋಗಿಗಳ ಸಂಯೋಜನೆ :
ಈ ವಿಶೇಷ ರೈಲುಗಳು ಒಟ್ಟು 20 ಐಸಿಎಫ್ (ICF) ಬೋಗಿಗಳನ್ನು ಒಳಗೊಂಡಿರಲಿವೆ:
1 ಎಸಿ 2-ಟಯರ್ ಬೋಗಿ (AC 2-Tier)
2 ಎಸಿ 3-ಟಯರ್ ಬೋಗಿಗಳು (AC 3-Tier)
9 ಸ್ಲೀಪರ್ ಕ್ಲಾಸ್ ಬೋಗಿಗಳು (Sleeper Class)
6 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು (General Unreserved)
2 ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು (SLRD)
ಕೇರಳ ಮತ್ತು ಕರ್ನಾಟಕ ನಡುವೆ ಪ್ರಯಾಣಿಸುವ ಸಾರ್ವಜನಿಕರು ಹಾಗೂ ಓಣಂ ಹಬ್ಬಕ್ಕೆ ಸ್ವಊರಿಗೆ ತೆರಳುವ ಪ್ರಯಾಣಿಕರು ಈ ವಿಶೇಷ ರೈಲು ಸೇವೆಯ ಪ್ರಯೋಜನ ಪಡೆದುಕೊಳ್ಳುವಂತೆ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಕೋರಿದೆ.