HomeKarnatakaBIG NEWS: ಪುರಸಭೆ ಮಾಜಿ ಅಧ್ಯಕ್ಷನ ವಿರುದ್ದ ಲವ್-ಸೆಕ್ಸ್-ದೋಖಾ ಆರೋಪ: ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ...

BIG NEWS: ಪುರಸಭೆ ಮಾಜಿ ಅಧ್ಯಕ್ಷನ ವಿರುದ್ದ ಲವ್-ಸೆಕ್ಸ್-ದೋಖಾ ಆರೋಪ: ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ

ಮೈಸೂರು: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧವನ್ನು ಬೆಳೆಸಿ ಕೈಕೊಟ್ಟ ಪುರಸಭೆ ಮಾಜಿ ಅಧ್ಯಕ್ಷ ಈಗ ಬೇರೊಂದು ಯುವತಿಯನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸಂತ್ರಸ್ತ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ನಡೆದಿದೆ.

ಪುರಸಭೆ ಮಾಜಿ ಅಧ್ಯಕ್ಷ ಮದನ್ ವಿರುದ್ಧ ಲವ್-ಸೆಕ್ಸ್-ದೋಖಾ ಕೇಸ್ ದಾಖಲಾಗಿದೆ. ಯುವತಿಯೊಬ್ಬಳನ್ನು ಪ್ರೀತಿಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ್ದಲ್ಲದೇ ಇದೀಗ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಿದ್ಧತೆ ನಡೆಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ಮೋಸ ಹೋಗಿರುವ ಯುವತಿ ಟಿ.ನರಸಿಪುರ ಪೊಲಿಸ್ ಠಾಣೆಯಲ್ಲಿ ಮದನ್ ವಿರುದ್ಧ ದೂರು ದಾಖಲಿಸಿದ್ದಾರೆ. ಯುವತಿ ನೀಡಿರುವ ದೂರಿನಲ್ಲಿ ಮದನ್‌, ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈಗ ಮದುವೆಯಾಗುವಂತೆ ಕೇಳಿದರೆ ಸದ್ಯಕ್ಕೆ ಒಟ್ಟಿಗೆ ಇರೋಣ ಎಂದು ಕಾರಣಗಳನ್ನು ಹೇಳುತ್ತಿದ್ದಾನೆ. ಆತನ ಜೊತೆ ನಾನಿದ್ದ ಫೋಟೋಗಳಿರುವ ಮೊಬೈಲ್‌ಗಳನ್ನು ನನ್ನಿಂದ ಕಿತ್ತುಕೊಂಡಿದ್ದಾನೆ. ಮದುವೆಗೆ ಒತ್ತಾಯಿಸಿದ್ದಕ್ಕೆ ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ಹೇಳಿ ಇಬ್ಬರೂ ವಿಷಕುಡಿದು ಆತ್ಮಹತ್ಯೆ ,ಆಡಿಕೊಳ್ಳೋಣವೆಂದು ಹೇಳಿ ನನಗೆ ಮಾತ್ರ ವಿಷ ಕೊಟ್ಟು ಕೊಲೆಗೆ ಯತ್ನಿಸಿದ್ದಾನೆ. ತಾನೂ ವಿಷ ಸೇವಿಸಿದಂತೆ ನಾಟಕವಾಡಿ ಎಸ್ಕೇಪ್ ಆಗಿದ್ದಾನೆ. ಈಗ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಿದ್ಧತೆ ನಡೆಸಿದ್ದಾನೆ. ಮದನ್ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಕೊಡಿಸುವಂತೆ ಸಂತ್ರಸ್ತೆ ಒತ್ತಾಯಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮದನ್ ತಲೆಮರೆಸಿಕೊಂಡಿದ್ದಾನೆ. ಎಸ್ಕೇಪ್ ಆಗಿರುವ ಆರೋಪಿ ಮದನ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular