HomeKarnatakaBIG NEWS: ತಡೆಗೋಡೆ ಕಂಬಗಳ ನಡುವೆ ಸಿಲುಕಿ ಕಾಡಾನೆ ಒದ್ದಾಟ

BIG NEWS: ತಡೆಗೋಡೆ ಕಂಬಗಳ ನಡುವೆ ಸಿಲುಕಿ ಕಾಡಾನೆ ಒದ್ದಾಟ

ಮೈಸೂರು: ಕಾಡಿನಿಂದ ನಡಿಗೆ ಆಹಾರ ಅರಸುತ್ತ ಬಂದ ಕಡಾನೆಯೊಂದು ತಡೆಗೋಡೆ ಕಂಬಗಲ ನಡುವೆ ಸಿಲುಕಿ ಒದ್ದಾಡಿದ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಳ್ಳಿಯ ಮದಗನೂರು ಕೆರೆಯಂಚಲ್ಲಿ ನಡೆದಿದೆ.

ಸುಮಾರು 30 ವರ್ಷದ ಕಾಡಾನೆಯೊಂದು ತಡೆಗೋಡೆ ಕಂಬಗಳ ನಡುವೆ ಸಿಲುಕಿಕೊಂಡಿದೆ. 2021ರಲ್ಲಿ ಈ ಆನೆಗೆ ನಾಗರಹೊಳೆ ಎಲಿಫೆಂಟ್ 1 ಎಂಬ ಹೆಸರಲ್ಲಿ ರೆಡಿಯೋ ಕಾಲರ್ ಅಳವಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆನೆ ಯವ ಸ್ಥಳದಲ್ಲಿ ಸಿಲುಕುಕಿಕೊಂಡಿದೆ ಎಂಬುದನ್ನು ಪತ್ತೆಮಾಡುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುಲಭವಾಯಿತು.

ತಕ್ಷಣ ಡಿಸಿಎಫ್ ಸೀಮಾ, ಎಸಿಎಫ್ ಲಕ್ಷ್ಮೀಕಾಂತ್ ಹಾಗೂ ಸಿಬಂದಿಗಳು ಸ್ಥಳಕ್ಕಾಗಮಿಸಿ ಜೆಸಿಬಿ ಮೂಲಕ ತಡೆಗೋಡೆ ತೆರವು ಮಾಡಿ ಆನೆಯನ್ನು ರಕ್ಷಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular