HomeKarnatakaಪ್ರಯಾಣಿಕರ ಗಮನಕ್ಕೆ: ರಾಜ್ಯದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರಿ ಬದಲಾವಣೆ: ಮೈಸೂರು-ತಾಳಗುಪ್ಪ ಸೇರಿದಂತೆ ಹಲವು ರೈಲುಗಳು...

ಪ್ರಯಾಣಿಕರ ಗಮನಕ್ಕೆ: ರಾಜ್ಯದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರಿ ಬದಲಾವಣೆ: ಮೈಸೂರು-ತಾಳಗುಪ್ಪ ಸೇರಿದಂತೆ ಹಲವು ರೈಲುಗಳು ಸಂಪೂರ್ಣ ರದ್ದು

ಬೆಂಗಳೂರು: ನೈರುತ್ಯ ರೈಲ್ವೆ ವಲಯವು ರಾಜ್ಯದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಿದೆ.ಇಂದಿನಿಂದ ಮೈಸೂರು-ತಾಳಗುಪ್ಪ ಸೇರಿದಂತೆ ಹಲವು ರೈಲುಗಳು ಸಂಪೂರ್ಣ ರದ್ದಾಗಿವೆ.

ಬೆಂಗಳೂರಿನ ಕೆಎಸ್‌ಆರ್ ಯಾರ್ಡ್ ನವೀಕರಣ ಮತ್ತು ಹೊಳೆನರಸೀಪುರದಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಜೂನ್ 18 ಇಂದಿನಿಂದ ಆಗಸ್ಟ್ ತಿಂಗಳವರೆಗೆ ಹಲವು ರೈಲುಗಳನ್ನು ರದ್ದುಪಡಿಸಲಾಗಿದೆ. ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ಸಂಪೂರ್ಣ ರದ್ದಾಗಿದ್ದು, ವಂದೇ ಭಾರತ್ ಮತ್ತು ಕಾವೇರಿ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗದಲ್ಲೂ ವ್ಯತ್ಯಯವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಳೆನರಸೀಪುರ ಮಾರ್ಗ ದಲ್ಲಿ ರದ್ದಾದ ರೈಲುಗಳು: ರಸ್ತೆ ಕೆಳಸೇತುವೆ ಕಾಮಗಾರಿಯಿಂದಾಗಿ ಕೆಳಗಿನ ರೈಲುಗಳ ಸಂಚಾರ ಇರುವುದಿಲ್ಲ.

ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ (16206)

ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ (16205)

ಅರಸೀಕೆರೆ–ಮೈಸೂರು ಪ್ಯಾಸೆಂಜರ್ (56267)

ಭಾಗಶಃ ರದ್ದು ಮತ್ತು ವಿಳಂಬವಾಗುವ ರೈಲುಗಳು:

ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16225): ಈ ರೈಲು ಜೂನ್ 18 ಮತ್ತು 23 ರಂದು ಮೈಸೂರಿನಿಂದ ಹೊರಡುವ ಬದಲಾಗಿ ಅರಸೀಕೆರೆಯಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಇದರಿಂದ ಮೈಸೂರು, ಕೆ.ಆರ್.ನಗರ ಮತ್ತು ಹಾಸನದ ಪ್ರಯಾಣಿಕರಿಗೆ ಸೇವೆ ಲಭ್ಯವಿರುವುದಿಲ್ಲ.

ಮೈಸೂರು–ಯಶವಂತಪುರ ಎಕ್ಸ್‌ಪ್ರೆಸ್ (16208): ಈ ರೈಲು ಮಾರ್ಗ ಮಧ್ಯೆ ನಿಯಂತ್ರಣಕ್ಕೊಳಗಾಗಲಿದ್ದು, ನಿಗದಿತ ಸಮಯಕ್ಕಿಂತ 30 ರಿಂದ 120 ನಿಮಿಷಗಳಷ್ಟು ತಡವಾಗಿ ಸಂಚರಿಸಲಿದೆ.

ಜುಲೈ-ಆಗಸ್ಟ್‌ನಲ್ಲಿ ವಂದೇ ಭಾರತ್, ಕಾವೇರಿ ಎಕ್ಸ್‌ಪ್ರೆಸ್ ರದ್ದು:
ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣವಾದ ಕೆಎಸ್‌ಆರ್ (ಮೆಜೆಸ್ಟಿಕ್) ನಲ್ಲಿ ಯಾರ್ಡ್ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಕೇರಳ ಮತ್ತು ತಮಿಳುನಾಡಿಗೆ ಸಂಚರಿಸುವ ಕೆಳಗಿನ ರೈಲು ಸೇವೆಗಳಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು-ಕೇರಳ ವಂದೇ ಭಾರತ್ ರದ್ದು: ಜುಲೈ 31 ಮತ್ತು ಆಗಸ್ಟ್ 3 ರಂದು ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (26652) ರೈಲು ಕೆಎಸ್‌ಆರ್ ನಿಲ್ದಾಣಕ್ಕೆ ಬರುವ ಬದಲಾಗಿ ಕೃಷ್ಣರಾಜಪುರಂ (ಕೆ.ಆರ್.ಪುರಂ) ನಿಲ್ದಾಣದಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.

ಲಾಲ್‌ಬಾಗ್ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆ: ಜುಲೈ 31 ರಿಂದ ಆಗಸ್ಟ್ 3 ರವರೆಗೆ ಚೆನ್ನೈ-ಬೆಂಗಳೂರು ಲಾಲ್‌ಬಾಗ್ ಎಕ್ಸ್‌ಪ್ರೆಸ್ ರೈಲನ್ನು ಬೈಯಪ್ಪನಹಳ್ಳಿಯಿಂದಲೇ ಎಸ್‌ಎಂವಿಟಿ (SMVT) ಬೆಂಗಳೂರು ನಿಲ್ದಾಣಕ್ಕೆ ತಿರುಗಿಸಲಾಗುತ್ತದೆ.

ಆಗಸ್ಟ್‌ನಲ್ಲಿ ಸಂಪೂರ್ಣ ರದ್ದಾಗಲಿರುವ ಪ್ರಮುಖ ರೈಲುಗಳು:
ಆಗಸ್ಟ್ 1: ಕೆಎಸ್‌ಆರ್ ಬೆಂಗಳೂರು ಟು ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12658) – ರದ್ದು

ಆಗಸ್ಟ್ 2: ಚೆನ್ನೈ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12657) – ರದ್ದು

ಆಗಸ್ಟ್ 2 ಮತ್ತು 3: ಚೆನ್ನೈ-ಅಶೋಕಪುರಂ ಕಾವೇರಿ ಎಕ್ಸ್‌ಪ್ರೆಸ್ ರೈಲು – ರದ್ದು

ರೈಲ್ವೆ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ದಕ್ಷತೆ ಹೆಚ್ಚಿಸಲು ಈ ಮಹತ್ವದ ಕಾಮಗಾರಿ ಅಗತ್ಯವಾಗಿದ್ದು, ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕೃತ ಹೆಲ್ಪ್‌ಲೈನ್ ಅಥವಾ ಆಪ್‌ಗಳ ಮೂಲಕ ರೈಲಿನ ಇಂದಿನ ಸ್ಥಿತಿಯನ್ನು ಪರಿಶೀಲಿಸಿ ಪ್ರಯಾಣ ಬೆಳೆಸಲು ಕೋರಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular