HomeKarnatakaBIG NEWS: ಮೈಸೂರಿನಲ್ಲಿ ಎಸೆನ್ಸ್ ಕುಡಿದು ಓರ್ವ ಕೈದಿ ಸಾವು; ಇಬ್ಬರ ಸ್ಥಿತಿ ಗಂಭೀರ

BIG NEWS: ಮೈಸೂರಿನಲ್ಲಿ ಎಸೆನ್ಸ್ ಕುಡಿದು ಓರ್ವ ಕೈದಿ ಸಾವು; ಇಬ್ಬರ ಸ್ಥಿತಿ ಗಂಭೀರ

ಮೈಸೂರು: ಕೇಕ್ ತಯಾರಿಕೆಗೆ ಬಳಸುತ್ತಿದ್ದ ಎಸೆನ್ಸ್ ಕುಡಿದು ಕೈದಿಯೋರ್ವ ಸಾವನ್ನಪ್ಪಿದ್ದು, ಇಬ್ಬರು ಕೈದಿಗಳು ಅಸ್ವಸ್ಥರಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೊಸ ವರ್ಷದ ಆಚರಣೆಗಾಗಿ ಕೇಕ್ ತಯಾರಿಸಲೆಂದು ಎಸೆನ್ಸ್ ತರಿಸಲಾಗಿತ್ತು. ಜೈಲಿನಲ್ಲಿ ಮೂವರು ಕೈದಿಗಳು ಎಸೆನ್ಸ್ ಕುಡಿದು ತೀವ್ರ ಅಸ್ವಸ್ಥರಾಗಿದ್ದರು. ಅವರಲ್ಲಿ ಓರ್ವ ಕೈದಿ ಮೃತಪಟ್ಟಿದ್ದಾನೆ. ಮೈಸೂರಿನ ಸಾತಗಳ್ಳಿಯ ಮಾದೇಶ್ ಮೃತ ಕೈದಿ.

ರಮೇಶ್ ಹಾಗೂ ನಾಗರಾಜ್ ಎಂಬ ಇಬ್ಬರು ಕೈದಿಗಳ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸ ವರ್ಷ ಹಿನ್ನೆಲೆಯಲ್ಲಿ ಕೇಕ್ ತಯಾರಿಸಲು ಎಸೆನ್ಸ್ ತರಿಸಲಾಗಿತ್ತು. ಕೇಕ್ ತಯಾರಿಸುವ ವಿಭಾಗದಲ್ಲಿ ಮೂವರು ಕೈದಿಗಳು ಕೆಲಸ ಮಾಡುತ್ತಿದ್ದರು. ಕಿಕ್ ಗಾಗಿ ಮೂವರು ಕೈದಿಗಳು ಎಸೆನ್ಸ್ ಸೇವಿಸಿ ಅಸ್ವಸ್ಥರಾಗಿದ್ದರು. ಇದೀಗ ಓರ್ವ ಕೈದಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

 

For Latest News Updates, Join Our Whatsapp Community🚩
RELATED ARTICLES

Most Popular