HomeKarnatakaಚುನಾವಣಾ ಫಲಿತಾಂಶದ ದಿನ ಅತಿ ಹೆಚ್ಚು ಮಾರಾಟವಾದ ಸಿಹಿ ತಿನಿಸು ಯಾವುದು ಗೊತ್ತಾ ? ಇಲ್ಲಿದೆ...

ಚುನಾವಣಾ ಫಲಿತಾಂಶದ ದಿನ ಅತಿ ಹೆಚ್ಚು ಮಾರಾಟವಾದ ಸಿಹಿ ತಿನಿಸು ಯಾವುದು ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಯಾವುದೇ ಮದುವೆ, ಸಂಭ್ರಮಾಚರಣೆ, ಸಮಾರಂಭಗಳಿಗೆ ಕರ್ನಾಟಕದಲ್ಲಿ ಮೈಸೂರು ಪಾಕ್ ಮೊದಲ ಆಯ್ಕೆಯ ಸಿಹಿಯಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದಂದೂ ಸಹ ರಾಜಕೀಯ ನಾಯಕರು , ಕಾರ್ಯಕರ್ತರಿಗೆ ಮೈಸೂರು ಪಾಕ್ ಅತ್ಯಂತ ಪ್ರಿಯವಾದ ಸಿಹಿಯಾಗಿತ್ತು. ಮೇ 10ರ ಫಲಿತಾಂಶ ದಿನ ಬೆಂಗಳೂರು ನಗರದಾದ್ಯಂತ ಜನಪ್ರಿಯ ಸಿಹಿತಿಂಡಿಗಳ ಮಾರಾಟದಲ್ಲಿ ಮೈಸೂರು ಪಾಕ್ 40% ರಿಂದ 60% ರಷ್ಟು ಏರಿಕೆ ಕಂಡಿದೆ.

ಚುನಾವಣೆ ಫಲಿತಾಂಶ ಪ್ರಕಟವಾದಾಗ ನಾವು ಮೈಸೂರು ಪಾಕ್ ಮಾರಾಟದಲ್ಲಿ 40% ಏರಿಕೆ ಕಂಡಿದ್ದೇವೆ ಎಂದು ಇಂಡಿಯಾ ಸ್ವೀಟ್ ಹೌಸ್ ಸಂಸ್ಥಾಪಕ ವಿಶ್ವನಾಥ ಮೂರ್ತಿ ಹೇಳಿದ್ದಾರೆ. ಸಾಮಾನ್ಯವಾಗಿ ಹೆಚ್ಚಾಗಿ ಮಾರಾಟವಾಗುವ ಮೋತಿಚೂರ್ ಲಡ್ಡುಗಳ ಬದಲು ಕಳೆದ ವಾರ ಗ್ರಾಹಕರು ಮೈಸೂರು ಪಾಕ್‌ ಖರೀದಿಸಿದರು ಎಂದು ಅವರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಹು ಮಳಿಗೆಗಳನ್ನು ಹೊಂದಿರುವ ಮತ್ತೊಂದು ಜನಪ್ರಿಯ ಸಿಹಿ ಅಂಗಡಿಯು ಚುನಾವಣಾ ಫಲಿತಾಂಶಗಳ ದಿನದಂದು ಭಾರೀ ಆರ್ಡರ್‌ಗಳನ್ನು ಪಡೆದುಕೊಂಡಿತ್ತು. ಬೆಳಗ್ಗೆ ಮತ ಎಣಿಕೆ ಇನ್ನೂ ಪ್ರಾರಂಭವಾಗದಿದ್ದಾಗ, ನಮಗೆ ಹಲವಾರು ದೊಡ್ಡ ರಾಜಕಾರಣಿಗಳಿಂದ ಕರೆಗಳು ಬಂದವು. ಕೆಲವರು ತಮ್ಮ ಅಬ್ಬರದ ಗೆಲುವಿನ ಬಗ್ಗೆ ಖಚಿತವಾಗಿದ್ದರು ಎಂದು ಅಂಗಡಿ ವ್ಯವಸ್ಥಾಪಕರೊಬ್ಬರು ತಿಳಿಸಿದ್ದಾರೆ. ಕಳೆದ ವಾರಾಂತ್ಯದಲ್ಲಿ ಅಂಗಡಿಯು 500 ಕೆಜಿ ಮೈಸೂರು ಪಾಕ್ ಸಿಹಿಯನ್ನು ಮಾರಾಟ ಮಾಡಿದೆ.

ವೆಂಕಟೇಶ್ವರ ಸ್ವೀಟ್ ಗಾಂಧಿ ಬಜಾರ್‌ನಲ್ಲಿ ಚುನಾವಣಾ ಫಲಿತಾಂಶದ ದಿನದಂದು ಮೈಸೂರು ಪಾಕ್ ಮಾರಾಟವು 60% ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಕಳೆದ ವಾರ ನಗರಕ್ಕೆ ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ಭೇಟಿ ಸೇರಿದಂತೆ ಪರೀಕ್ಷಾ ಫಲಿತಾಂಶಗಳು ಕೂಡ ಹೆಚ್ಚು ಮೈಸೂರು ಪಾಕ್ ಮಾರಾಟವಾಗಲು ಕಾರಣವಾದ ಅಂಶಗಳಾಗಿವೆ.

For Latest News Updates, Join Our Whatsapp Community🚩
RELATED ARTICLES

Most Popular