HomeKarnatakaಅಸುರಕ್ಷಿತ ಆಹಾರ ಪದಾರ್ಥ ತಯಾರಕರಿಗೆ ದಂಡ

ಅಸುರಕ್ಷಿತ ಆಹಾರ ಪದಾರ್ಥ ತಯಾರಕರಿಗೆ ದಂಡ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2025-26 ಮತ್ತು 2026-27 ಪ್ರಸ್ತುತ ದಿನಾಂಕದವರೆಗೆ ಒಟ್ಟು 899 ಆಹಾರ ಮಾದರಿಗಳನ್ನು Chief Food Analyst, Division Food Laboratory, Mysore  ಇಲ್ಲಿ ವಿಶ್ಲೇಷಣೆ ಮಾಡಲಾಗಿದ್ದು. 4 ಆಹಾರ ಮಾದರಿಯ ವಿಶ್ಲೇಷಣಾ ವರದಿಯೂ ಅಸುರಕ್ಷಿತ ಮತ್ತು 2 ಆಹಾರ ಮಾದರಿಯ ವಿಶ್ಲೇಷಣಾ ವರದಿಯೂ ಕಡಿಮೆ ಗುಣಮಟ್ಟ ಎಂದು ವರದಿ ಬಂದಿರುತ್ತದೆ.

ಅಸುರಕ್ಷಿತ ಆಹಾರ ಪದಾರ್ಥ ತಯಾರು/ ಮಾರಾಟ ಮಾಡುತ್ತಿರುವವರ ವಿರುದ್ಧ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಹಾಗೂ ಕಡಿಮೆ ಗುಣಮಟ್ಟದ ಆಹಾರ ಪದಾರ್ಥ ತಯಾರು/ ಮಾರಾಟ ಮಾಡುತ್ತಿರುವವರ ವಿರುದ್ಧ ಅಪರ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯ ನಿರ್ಣಾಯಾಧಿಕಾರಿಗಳು, ಕೊಡಗು ಜಿಲ್ಲೆ ರವರಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ ನಿಬಂಧನೆಗಳು -2011 ರ ಅನುಸಾರ ಸೆಕ್ಷನ್ 51 ಮೊಕದ್ಧಮೆ ದಾಖಲಿಸಿಲಾಗಿದೆ ಮತ್ತು ಆಹಾರ ಪದಾರ್ಥ ತಯಾರು/ಮಾರಾಟಗಾರರಿಗೆ ಅಪರ ಜಿಲ್ಲಾಧಿಕಾರಿ ಹಾಗೂ ನ್ಯಾಯ ನಿರ್ಣಾಯಾಧಿಕಾರಿಗಳು ಒಟ್ಟು ರೂ.10 ಸಾವಿರ ದಂಡವನ್ನು ವಿಧಿಸಿರುತ್ತಾರೆ.

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮಾರಾಟವಾಗುತ್ತಿರುವ ಸ್ಪೈಸಸ್(ಮಸಾಲೆ ಪದಾರ್ಥಗಳು) ಹಾಗೂ ಚಾಕೊಲೇಟ್ಸ್ ಅಂಗಡಿಗಳು, ವ್ಯಾಪಾರ ಹಾಗೂ ಮಸಾಲೆ ಪದಾರ್ಥಗಳ ಮಾರಾಟ ನಡೆಸುತ್ತಿರುವ ಘಟಕಗಳ ತಪಾಸಣೆ ನಡೆಸಿದಾಗ ಆಹಾರ ಪದಾರ್ಥಗಳಿಗೆ ಆಹಾರ ಪರವಾನಿಗೆ ಹಾಗೂ ಲೇಬಲಿಂಗ್ ನಿಯಮ ಪಾಲನೆ ಮಾಡದಿರುವುದು ಕಂಡು ಬಂದಿದ್ದು, ಸುಮಾರು 17 ಅಂಗಡಿಗಳ ವಿರುದ್ಧ ಅಪರ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯ ನಿರ್ಣಾಯಾಧಿಕಾರಿಗಳು, ಕೊಡಗು ಜಿಲ್ಲೆ ರವರಲ್ಲಿ ಸೆಕ್ಷನ್ 52 ರಲ್ಲಿ ಮೊಕದ್ಧಮೆ ದಾಖಲಿಸಲಾಗಿದೆ. ಅಪರ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯ ನಿರ್ಣಾಯಾಧಿಕಾರಿಗಳು ದಂಡವನ್ನು ವಿಧಿಸಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕುಗಳಲ್ಲಿ ಸೆಕ್ಷನ್ 56 ಮತ್ತು ಸೆಕ್ಷನ್ 63 ರ ಅಡಿಯಲ್ಲಿ ಒಟ್ಟು ರೂ.40 ಸಾವಿರ ದಂಡವನ್ನು ವಿಧಿಸಿರುತ್ತಾರೆ. ಅಂಕಿತಾಧಿಕಾರಿಗಳ ನೋಟಿಸ್ ಮತ್ತು ಗ್ರಾಹಕರ ದೂರುಗಳಿಗೆ ಸಂಬಂಧಪಟ್ಟಂತೆ 2025-26 ಮತ್ತು 2026-27 ಪ್ರಸ್ತುತ ದಿನಾಂಕದ ವರೆಗೆ ಒಟ್ಟು ರೂ.1 ಲಕ್ಷಕ್ಕೂ ಹೆಚ್ಚು ದಂಡ ವಿಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂಕಿತ ಅಧಿಕಾರಿ ಡಾ.ಅನಿಲ್ ಧಾವನ್ ಇ. ಅವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular