HomeKarnatakaBREAKING NEWS: ಮೈಸೂರು ದಸರಾ ಗಜಪಡೆ ಹಾಗೂ ಸಿಬ್ಬಂದಿಗಳಿಗೆ ವಿಮೆ ಮಾಡಿಸಿದ ಅರಣ್ಯ ಇಲಾಖೆ

BREAKING NEWS: ಮೈಸೂರು ದಸರಾ ಗಜಪಡೆ ಹಾಗೂ ಸಿಬ್ಬಂದಿಗಳಿಗೆ ವಿಮೆ ಮಾಡಿಸಿದ ಅರಣ್ಯ ಇಲಾಖೆ

ಮೈಸುರು: ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಗಜಪಡೆಗಳು ಇಂದು ಮೈಸೂರಿಗೆ ಆಗಮಿಸಲಿವೆ. ಇದೇ ವೇಳೆ ಅರಣ್ಯ ಇಲಾಖೆ ಮೈಸೂರು ದಸರಾ ಗಜಪಡೆಗಳಿಗೆ ವಿಮೆ ಮಾಡಿಸಿದೆ.

ಗಜಪಡೆಗಳಿಗೆ 87,50,000 ವಿಮೆ, ಅರಣ್ಯ ಸಿಬ್ಬಂದಿಗಳಿಗೆ 1 ಕೋಟಿ ಹಾಗೂ ಸಾರ್ವಜನಿಕರು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ 50 ಲಕ್ಷ ವಿಮೆ ಮಾಡಿಸಿದೆ. ಮತ್ತೆ ಗಜಪಡೆ ಕಾರು ಸೇರುವವರೆಗೂ ವಿಮೆ ಚಾಲ್ತಿಯಲ್ಲಿರುತ್ತದೆ.

ನಾಲ್ಕು ಮೀಸಲು ಆನೆಗಳು ಸೇರಿದಂತೆ 18 ಆನೆಗಳಿಗೆ 87,50,000 ಮಿವೆ ಮಾಡಿಸಲಾಗಿದ್ದು, ಅಧಿಕಾರಿಗಳು, ಕಾವಾಡಿಗಳು, ಮಾವುತರಿಗೆ ತಲಾ 2 ಲಕ್ಷ ರೂ ಒಟ್ಟು 50 ಜನರಿಗೆ 1 ಕೋಟಿ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದೇ ರೀತಿ ಸಾರ್ವಜನಿಕರು ಮತ್ತು ಆಸ್ತಿಪಾಸ್ತಿಗೆ 50 ಲಕ್ಷ ವಿಮೆ ಮಾಡಿಸಿದೆ. ದಸರಾ ಗಜಪಡೆಗಳು ನಡಿಗೆ ಬಂದ ಸಂದರ್ಭದಲ್ಲಿ ತಾಲೀಮು ಇನ್ನಿತರ ವೇಳೆ ಜನರ ಆಸ್ತಿಗೆ ತೊಂದರೆಯಾದರೆ 50 ಲಕ್ಷ ರೂ ವರೆಗೆ ವಿಮೆ ಸೇರಿದಂತೆ ಒಟ್ಟು 2,37,50,000 ರೂ ವಿಮೆಯನ್ನು ಅರಣ್ಯ ಇಲಾಖೆ ಮಾಡಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular