HomeKarnatakaಮೈಸೂರು ದಸರಾ ಮಹೋತ್ಸವ: ಗೋಲ್ಡ್ ಕಾರ್ಡ್ ಹಾಗೂ ವಿವಿಧ ಟಿಕೆಟ್‌ಗಳ ಆನ್‌ಲೈನ್ ಮಾರಾಟ ಆರಂಭ

ಮೈಸೂರು ದಸರಾ ಮಹೋತ್ಸವ: ಗೋಲ್ಡ್ ಕಾರ್ಡ್ ಹಾಗೂ ವಿವಿಧ ಟಿಕೆಟ್‌ಗಳ ಆನ್‌ಲೈನ್ ಮಾರಾಟ ಆರಂಭ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಅರಮನೆ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವಕ್ಕಾಗಿ ಸಿದ್ಧತೆಗಳು ಜೋರಾಗಿ ಸಾಗಿವೆ. ದಸರಾ ಮಹೋತ್ಸವದ ಗೋಲ್ಡ್ ಕಾರ್ಡ್ ಹಾಗೂ ವಿವಿಧ ಕಾರ್ಯಕ್ರಮಗಳ ಟಿಕೆಟ್ ಮಾರಾಟ ಇಂದಿನಿಂದ ಆರಂಭವಾಗಿದೆ.

ಬೆಳಿಗ್ಗೆ 11:30 ರಿಂದ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಆರಂಭಗೊಂಡಿದೆ. ಗೋಲ್ಡ್ ಕಾರ್ಡ್‌ಗೆ 6,500 ರೂ., ಜಂಬೂ ಸವಾರಿಗೆ 3,500 ರೂ., ಪಂಜಿನ ಕವಾಯತಿಗೆ 1,500 ರೂ. ಹಾಗೂ ಡ್ರೋನ್ ಶೋ ವೀಕ್ಷಣೆಗೆ 1,000 ರೂ. ದರ ನಿಗದಿಪಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೋಲ್ಡ್ ಕಾರ್ಡ್ ಖರೀದಿದಾರರಿಗೆ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳ ಜೊತೆಗೆ ಅರಮನೆ, ಮೃಗಾಲಯ ಹಾಗೂ ಚಾಮುಂಡಿ ಬೆಟ್ಟಕ್ಕೆ ತಲಾ ಒಂದು ಬಾರಿ ಉಚಿತ ಪ್ರವೇಶ ಸಿಗಲಿದೆ.

ಅಕ್ಟೋಬರ್ 11ರಿಂದ ಮೈಸೂರು ದಸರಾ ಮಹೋತ್ಸವ ಆರಂಭವಾಗಲಿದ್ದು, ಅಕ್ಟೋಬರ್.21 ರಂದು ನಡೆಯಲಿರುವ ಜಂಬೂಸವಾರಿ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಿಗೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಆನ್ಲೈನ್‌ ಬುಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತರು ಮೈಸೂರು ದಸರಾ ಅಧಿಕೃತ ವೆಬ್ಸೈಟ್‌ www.mysoredasara.gov.in ನಲ್ಲಿ ಟಿಕೆಟ್‌ ಕಾಯ್ದಿರಿಸಬಹುದು.

ದರಗಳು ಕಳೆದ ವರ್ಷದಂತೆಯೇ ಇರಲಿದ್ದು, ಗೋಲ್ಡ್ ಕಾರ್ಡ್‌ನಲ್ಲಿ ಜಂಬೂಸವಾರಿ, ಪಂಜಿನ ಕವಾಯತು, ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಮತ್ತು ಒಂದು ದಿನದ ಡ್ರೋನ್‌ ಶೋ ವೀಕ್ಷಣೆಗೆ ಅವಕಾಶವಿದೆ. ಒಂದು ಟಿಕೆಟ್‌/ ಗೋಲ್ಡ್ ಕಾಡ್‌ರ್ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು, ಸಾರ್ವಜನಿಕರು ಮುಂಚಿತವಾಗಿ ಬುಕ್‌ ಮಾಡಿಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ವಯಸ್ಸಿನ ಕಾರಣದಿಂದ ಈ ಬಾರಿಯ ಮೈಸೂರು ದಸರಾ ಜಂಬೂ ಸವಾರಿಗೆ ಅಭಿಮನ್ಯು ಆನೆಯನ್ನು ಅಂಬಾರಿ ಹೊರಲು ಆಯ್ಕೆ ಮಾಡಿಲ್ಲ. ಅಭಿಮನ್ಯು ಆನೆಗೆ 60 ವರ್ಷ ದಾಟಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಭಿಮನ್ಯು ಇದುವರೆಗೆ ಹಲವು ಬಾರಿ ದಸರಾದಲ್ಲಿ ಭಾಗವಹಿಸಿದ್ದು, ಪ್ರಮುಖ ಕ್ಯಾಪ್ಟನ್ ಆಗಿ 750 ಕೆ.ಜಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ್ದಾನೆ. ವಯೋಮಿತಿಯ ಕಾರಣದಿಂದ ಈ ಬಾರಿ ಅವನಿಗೆ ವಿಶ್ರಾಂತಿ ನೀಡಲಾಗಿದ್ದು, ಅಂಬಾರಿ ಹೊರಲು ಧನಂಜಯ, ಮಹೇಂದ್ರ, ಪ್ರಶಾಂತ ಅಥವಾ ಸುಗ್ರೀವ ಆನೆಗಳ ಹೆಸರುಗಳು ಚರ್ಚೆಯಲ್ಲಿವೆ. ಆದರೆ ಈ ಬಾರಿ ಯಾವ ಆನೆ ಅಂಬಾರಿ ಹೊರಲಿದೆ ಎಂದು ಇನಷ್ಟೇ ನಿರ್ಧಾರವಾಗಬೇಕಿದೆ.

60 ವರ್ಷ ದಾಟಿದ ಕಾರಣ ಅಂಬಾರಿ ಹೊರಲು ಅವಕಾಶವಿಲ್ಲದಿದ್ದರೂ, ಲಕ್ಷಾಂತರ ಅಭಿಮಾನಿಗಳ ಮತ್ತು ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಸರ್ಕಾರ ವಿಶೇಷ ಅನುಮತಿ ನೀಡಿದೆ. ಅದರಂತೆ, ಈ ಬಾರಿಯ ಮೈಸೂರು ದಸರಾ ಜಂಬೂಸವಾರಿಯಲ್ಲಿ ಅಭಿಮನ್ಯು ಆನೆಗೆ ಗೌರವಯುತವಾಗಿ ನಿಶಾನೆ ಆನೆಯಾಗಿ ಮೆರವಣಿಗೆಯ ಮುಂಚೂಣಿಯಲ್ಲಿ ಸಾಗುವ ಆನೆಯಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular