ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಕೆಫೆ ಸ್ಪೋಟದ ರೂವಾರಿಗಳು ಮುಸಾಫಿರ್ ಮತ್ತು ಹುಸೇನ್ ಶಬೀದ್ ಎಂಬುದು ಎನ್ ಐ ಐ ತನಿಖೆಯಿಂದ ಧೃಡವಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಿವಾಸಿಗಳಾದ ಇಬ್ಬರು ಕಳೆದ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದಾರೆ, ಇಬ್ಬರು ಆರೋಪಿಗಳು ಎನ್ ಐ ಯ ಹಿಟ್ ಲಿಸ್ಟ್ ನಲ್ಲಿದ್ದಾರೆ. ಕೆಫೆ ಸ್ಪೋಟದ ರೂವಾರಿಗಳು ಮುಸಾಫಿರ್ ಮತ್ತು ಹುಸೇನ್ ಶಬೀದ್ ಎಂಬುದು ಎನ್ ಐ ಐ ತನಿಖೆಯಿಂದ ಧೃಡವಾಗಿದೆ. ಕೆಫೆಯಲ್ಲಿ ನಡೆದ ಸ್ಪೋಟದ ಹಿಂದೆ ಇಬ್ಬರು ಆರೋಪಿಗಳ ಕೈವಾಡವಿರುವುದು ಧೃಡವಾಗಿದೆ. ಇದೀಗ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಎನ್ ಐ ಎ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಬಗ್ಗೆ ಸುಳಿವು ನೀಡಿದ್ರೆ 10 ಲಕ್ಷ ಬಹುಮಾನ ನೀಡುವುದಾಗಿ ಎನ್ ಐ ಎ ಘೋಷಣೆ ಮಾಡಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣವನ್ನು ಎನ್ ಐ ಎ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದೆ.
ಮಾರ್ಚ್ 1 ರಂದು ಬೆಂಗಳೂರಿನ ವೈಟ್ ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಒಂಬತ್ತು ಜನರು ಗಾಯಗೊಂಡಿದ್ದು, ಒಂದು ವಾರದ ನಂತರ ಮಾರ್ಚ್ 9 ರ ಶನಿವಾರ ಬೆಳಗ್ಗೆ 6 ಗಂಟೆಯಿಂದ ಬೆಂಗಳೂರಿನ ಕೆಫೆ ಆರಂಭವಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆ ಬೆಂಗಳೂರಿನಲ್ಲಿರುವ ಬಹಳ ಜನಪ್ರಿಯ ಕೆಫೆಯಾಗಿದೆ. ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸುತ್ತಾರೆ.

