HomeKarnatakaBREAKING: ಪೋಕ್ಸೋ ಕೇಸ್; ಮತ್ತೆ ಅರೆಸ್ಟ್ ಆದ ಮುರುಘಾ ಶ್ರೀ

BREAKING: ಪೋಕ್ಸೋ ಕೇಸ್; ಮತ್ತೆ ಅರೆಸ್ಟ್ ಆದ ಮುರುಘಾ ಶ್ರೀ

ಚಿತ್ರದುರ್ಗ: ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಕೋರ್ಟ್ ನಿಂದ ಬಂಧನ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.

2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಮುರುಘಾ ಶ್ರೀಗಳ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾವಣಗೆರೆ ಜಿಲ್ಲೆಯ ವಿರಕ್ತಮಠದಲ್ಲಿದ್ದ ಮುರುಘಾ ಶ್ರೀಗಳನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ಸ್ ಪೆಕ್ಟರ್ ಮುತ್ತುರಾಜ್ ನೇತೃತ್ವದ ತಂಡ ಶ್ರೀಗಳನ್ನು ಬಂಧಿಸಿದೆ.

ಮೊದಲನೇ ಪೋಕ್ಸೋ ಕೇಸ್ ನಲ್ಲಿ ಹೈಕೋರ್ಟ್ ಮುರುಘಾ ಶ್ರೀಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಮುರುಘಾ ಶ್ರೀ ಜೈಲಿನಿಂದ ಬಿಡುಗಡೆಯಾಗಿದ್ದರು. ಚಿತ್ರದುರ್ಗಕ್ಕೆ ಪ್ರವೇಶ ನಿರಾಕರಿಸಿದ್ದರಿಂದ ಮುರುಘಾ ಶ್ರೀಗಳು ದಾವಣಗೆರೆ ವಿರಕ್ತಮಠದಲ್ಲಿದ್ದರು. ಆದರೆ ಎರಡನೇ ಪೋಕ್ಸೋ ಕೇಸ್ ನಲ್ಲಿ ಬಂಧನ ವಾರಂಟ್ ಜಾರಿ ಹಿನ್ನೆಲೆಯಲ್ಲಿ ಈಗ ಮುರುಘಾ ಶ್ರೀಗಳನ್ನು ಮತ್ತೆ ಬಂಧಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular