HomeKarnatakaಪ್ರದೀಪ್ ಈಶ್ವರ್ ಎರಡನೇ ಹುಚ್ಚ ವೆಂಕಟ್: ಬಿಜೆಪಿ ಸಂಸದ ಮುನಿಸ್ವಾಮಿ

ಪ್ರದೀಪ್ ಈಶ್ವರ್ ಎರಡನೇ ಹುಚ್ಚ ವೆಂಕಟ್: ಬಿಜೆಪಿ ಸಂಸದ ಮುನಿಸ್ವಾಮಿ

ಬೆಂಗಳೂರು: ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಮತ್ತು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವೆ ವಾಕ್ಸಮರ ನಡೆದಿದೆ.

ಬಿಜೆಪಿ ಸಂಸದ ಮುನಿಸ್ವಾಮಿ ಚೈಲ್ಡ್ ಆರ್ಟಿಸ್ಟ್ ಇದ್ದಂಗೆ. ಅವರು ಮುನಿಸ್ವಾಮಿ ಅಲ್ಲ, ಮನಿಸ್ವಾಮಿ ಎಂದು ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ. ಚಿಂತಾಮಣಿ, ಕೋಲಾರದ ಪ್ರಭಾವಿ ನಾಯಕರು ಮನಸು ಮಾಡದಿದ್ದರೆ ಮುನಿಸ್ವಾಮಿ ಹೇಗೆ ಸಂಸದರಾಗುತ್ತಿದ್ದರು? ಅವರಿಗೆ ಒಬ್ಬ ಸಂಸದ ಹೇಗಿರಬೇಕು ಎನ್ನುವುದೇ ಗೊತ್ತಿಲ್ಲ. ನನಗೆ ಇನ್ನೂ ಐದು ವರ್ಷಕ್ಕೆ ಚುನಾವಣೆ ಇದೆ. ಮುಂದಿನ ವರ್ಷವೇ ಮುನಿಸ್ವಾಮಿ ಅವರ ಹಬ್ಬ ಇದ್ದು ನೋಡೇ ಬಿಡೋಣ ಎಂದು ಸವಾಲು ಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕೆ ತಿರುಗೇಟು ನೀಡಿರುವ ಸಂಸದ ಮುನಿಸ್ವಾಮಿ ಅವರು, ಪ್ರದೀಪ್ ಈಶ್ವರ್ ಗೆ ರಾಜಕೀಯ ಪ್ರಬುದ್ಧತೆ ಇಲ್ಲ. ನನ್ನ ಹತ್ತಿರ ಟ್ಯೂಷನ್ ಗೆ ಬರಲಿ. ಮೊದಲ ಬಾರಿಗೆ ಶಾಸಕರಾಗಿರುವ ಪ್ರದೀಪ್ ಈಶ್ವರ್ ಎರಡನೇ ಹುಚ್ಚ ವೆಂಕಟ್ ರೀತಿ ಆಡುತ್ತಿದ್ದಾರೆ. ಇಂತಹ ಡ್ರಾಮಾ ಕಂಪನಿಗಳನ್ನು ಬಹಳ ನೋಡಿದ್ದೇನೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular