HomeIndiaViral Video | ಸಾಂಪ್ರದಾಯಿಕವಾಗಿ ಸೀರೆಯುಟ್ಟು ಯೋಗಾಭ್ಯಾಸ ಮಾಡಿದ ಮಹಿಳೆಯರು

Viral Video | ಸಾಂಪ್ರದಾಯಿಕವಾಗಿ ಸೀರೆಯುಟ್ಟು ಯೋಗಾಭ್ಯಾಸ ಮಾಡಿದ ಮಹಿಳೆಯರು

ಇಂದು ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ ಯೋಗಾಭ್ಯಾಸ ನಡೆದಿದೆ. ಯೋಗದ ಉಡುಪು ತೊಟ್ಟು ಅಭ್ಯಾಸ ಮಾಡುವುದು ಸಾಮಾನ್ಯವಾದರೆ, ಗೇಟ್ ವೇ ಆಫ್ ಇಂಡಿಯಾದಲ್ಲಿ ಮಹಾರಾಷ್ಟ್ರದ ಮಹಿಳೆಯರು ಸಾಂಪ್ರದಾಯಿಕ ನೌವರಿ ಸೀರೆಯಲ್ಲಿ ಯೋಗ ಪ್ರದರ್ಶನ ಮಾಡಿದರು.

ಈ ವಿಶೇಷ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು ವೈರಲ್ ಆಗಿದೆ. ಮಹಿಳೆಯರು ‘ಓಂ’ ಪಠಣದೊಂದಿಗೆ ಯೋಗಾಭ್ಯಾಸ ಆರಂಭಿಸಿದ್ದು ವಿವಿಧ ಆಸನಗಳನ್ನು ಸಾಂಪ್ರದಾಯಿಕ ಸೀರೆ ತೊಟ್ಟು ಮಾಡಿರೋದು ಗಮನ ಸೆಳೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಾರಾಷ್ಟ್ರದಲ್ಲಿ ಮಹಿಳೆಯರು ಧರಿಸುವ ಒಂಬತ್ತು ಗಜಗಳ ಸೀರೆ ಇದಾಗಿದೆ. ಒಂಬತ್ತು ಗಜಗಳಷ್ಟು ಸೀರೆಯ ಉದ್ದದಿಂದ ‘ನೌವರಿ’ ಎಂಬ ಹೆಸರು ಹುಟ್ಟಿಕೊಂಡಿತು.

 

For Latest News Updates, Join Our Whatsapp Community🚩
RELATED ARTICLES

Most Popular