HomeLatest Newsಸಚಿವರಿಗೇ ರಸ್ತೆಯಲ್ಲೇ ಕ್ಲಾಸ್ ತಗೊಂಡ ಮುಂಬೈ ನಾರಿ: ಭಾಷಣ ನಿಲ್ಲಿಸಿ ಮೊದಲು ಟ್ರಾಫಿಕ್ ಕ್ಲಿಯರ್ ಮಾಡಿ...

ಸಚಿವರಿಗೇ ರಸ್ತೆಯಲ್ಲೇ ಕ್ಲಾಸ್ ತಗೊಂಡ ಮುಂಬೈ ನಾರಿ: ಭಾಷಣ ನಿಲ್ಲಿಸಿ ಮೊದಲು ಟ್ರಾಫಿಕ್ ಕ್ಲಿಯರ್ ಮಾಡಿ ಎಂದು ಗರ್ಜಿಸಿದ ಮಹಿಳೆ ವಿಡಿಯೋ ವೈರಲ್

ರಾಜಕಾರಣಿಗಳ ಅಬ್ಬರಕ್ಕೆ ಜನಸಾಮಾನ್ಯರು ರಸ್ತೆಯಲ್ಲಿ ಹೈರಾಣಾಗೋದು ಹೊಸದೇನಲ್ಲ. ಆದರೆ ಮುಂಬೈನಲ್ಲಿ ಸಚಿವರೊಬ್ಬರಿಗೆ ಮಹಿಳೆಯೊಬ್ಬರು ಚಳಿ ಬಿಡಿಸಿರೋದು ಈಗ ದೇಶಾದ್ಯಂತ ಸದ್ದು ಮಾಡ್ತಿದೆ ಮಹಿಳಾ ಮೀಸಲಾತಿ ಬಗ್ಗೆ ಸಚಿವ ಗಿರೀಶ್ ಮಹಾಜನ್ ವೇದಿಕೆಯ ಮೇಲೆ ದೊಡ್ಡ ಭಾಷಣ ಬಿಗಿಯುತ್ತಿದ್ದರೆ, ಇತ್ತ ಅದೇ ಮೀಸಲಾತಿಯ ಹಕ್ಕಿನಿಂದ ಮಹಿಳೆಯೊಬ್ಬರು ರೊಚ್ಚಿಗೆದ್ದು ಸಚಿವರಿಗೇ ಬೆವರಿಳಿಸಿದ್ದಾರೆ. ರಾಜಕೀಯ ರ್‍ಯಾಲಿಗಳ ಹೆಸರಲ್ಲಿ ಜನರಿಗೆ ಕಿರುಕುಳ ನೀಡಿದ್ರೆ ಸುಮ್ಮನಿರಬೇಕಾ? ಖಂಡಿತಾ ಇಲ್ಲ ಅಂತ ಮುಂಬೈ ನಾರಿ ನಡುರಸ್ತೆಯಲ್ಲೇ ಸಾಬೀತು ಮಾಡಿದ್ದಾರೆ

ನಡೆದಿದ್ದೇನು?

ಮುಂಬೈನ ವರ್ಲಿಯ ಜಾಂಬೋರಿ ಮೈದಾನದಿಂದ ಡೋಮ್‌ವರೆಗೆ ಮಹಾಯುತಿ ಮೈತ್ರಿಕೂಟದ (ಬಿಜೆಪಿ ನೇತೃತ್ವದ) ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು. ಕೇಂದ್ರದಲ್ಲಿ ಮಹಿಳಾ ಮೀಸಲಾತಿ ಮಸೂದೆ ತಿರಸ್ಕೃತಗೊಂಡಿದ್ದನ್ನು ಖಂಡಿಸಿ ಕಾಂಗ್ರೆಸ್ ಮತ್ತು ಎಂವಿಎ ವಿರುದ್ಧ ಸಾವಿರಾರು ಮಹಿಳೆಯರು ಬೀದಿಗಿಳಿದಿದ್ದರು. ಸಂಜೆ 5 ಗಂಟೆಗೆ ಶುರುವಾಗಬೇಕಿದ್ದ ಈ ರ್‍ಯಾಲಿ ವಿಳಂಬವಾದ ಕಾರಣ, ಇಡೀ ವರ್ಲಿ ಭಾಗ ಸ್ತಬ್ಧವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಯಿಯ ಆಕ್ರೋಶದ ಮುಂದೆ ಸಚಿವರು ಸೈಲೆಂಟ್

ಇದೇ ಟ್ರಾಫಿಕ್‌ನಲ್ಲಿ ಮಹಿಳೆಯೊಬ್ಬರು ತನ್ನ ಮಗುವನ್ನು ಶಾಲೆಯಿಂದ ಕರೆತರಲು ಹೋಗುತ್ತಿದ್ದಾಗ ಗಂಟೆಗಟ್ಟಲೆ ಸಿಲುಕಿಕೊಂಡಿದ್ದರು. ತಾಳ್ಮೆ ಕಳೆದುಕೊಂಡ ಆ ಮಹಿಳೆ, ಕಾರ್‌ನಿಂದ ಕೆಳಗಿಳಿದು ನೇರವಾಗಿ ಮೆರವಣಿಗೆಯ ಮಧ್ಯಕ್ಕೆ ನುಗ್ಗಿದ್ದಾರೆ. ಅಲ್ಲಿ ಭಾಷಣ ಸಿದ್ಧತೆಯಲ್ಲಿದ್ದ ಸಚಿವ ಗಿರೀಶ್ ಮಹಾಜನ್ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ

ಇಲ್ಲಿ ನೂರಾರು ಜನರು ಕಾಯುತ್ತಿದ್ದಾರೆ. ಪಕ್ಕದಲ್ಲೇ ಖಾಲಿ ಮೈದಾನವಿದ್ದರೂ ರಸ್ತೆಯಲ್ಲೇಕೆ ಮೆರವಣಿಗೆ ಮಾಡ್ತೀರಾ? ಎಂದು ಕಿರುಚುತ್ತಾ ಸಚಿವರ ಬೆವರು ಇಳಿಸಿದ್ದಾರೆ.

ಇಲ್ಲಿಂದ ಮೊದಲು ಜಾಗ ಖಾಲಿ ಮಾಡಿ (Get out of here!)” ಎಂದು ಸಚಿವರಿಗೆ ಮತ್ತು ಪ್ರತಿಭಟನಾಕಾರರಿಗೆ ಅಕ್ಷರಶಃ ಕ್ಲಾಸ್ ತಗೊಂಡಿದ್ದಾರೆ.

ಸಚಿವರು ಮಹಿಳೆಯರ ಬಗ್ಗೆ ಭಾಷಣ ಬಿಗಿಯುತ್ತಿದ್ದರೆ, ಇತ್ತ ಅದೇ ಮಹಿಳೆಯೊಬ್ಬರು ಸಿಟ್ಟಿನಿಂದ ಬಂದು, “ನಿಮ್ಮ ಈ ಭಾಷಣ ಮತ್ತು ಶೋಕಿಯಿಂದ ನಮಗೆ ಇಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ, ಜನರಿಗೆ ತೊಂದರೆ ಕೊಡೋದು ನಿಲ್ಲಿಸಿ” ಎಂದು ಎಲ್ಲರ ಎದುರೇ ತರಾಟೆಗೆ ತೆಗೆದುಕೊಂಡರು.

ಸಚಿವರು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಆಕೆ ಮಾತ್ರ “ಮೊದಲು ಈ ರಸ್ತೆ ಕ್ಲಿಯರ್ ಮಾಡಿ, ಆಮೇಲೆ ಮೀಸಲಾತಿ ಬಗ್ಗೆ ಮಾತಾಡಿ” ಎಂದು ಗುಡುಗಿದ್ದಾರೆ. ಸಚಿವರು ಮತ್ತು ಅವರ ಬೆಂಬಲಿಗರು ಒಂದು ಕ್ಷಣ ಏನು ಮಾಡಬೇಕೆಂದು ತಿಳಿಯದೆ ಪೇಚಿಗೆ ಸಿಲುಕಿದ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಪೊಲೀಸರು ಆಕೆಯನ್ನು ತಡೆಯಲು ಬಂದಾಗ, ಪೊಲೀಸರ ಮೇಲೆಯೂ ಹರಿಹಾಯ್ದ ಆಕೆ, “ನನಗೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಬೇಕು” ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ಪೊಲೀಸರು ಆಕೆಯನ್ನು ಸಮಾಧಾನಪಡಿಸಿ ಪಕ್ಕಕ್ಕೆ ಕರೆದೊಯ್ದಿದ್ದಾರೆ. ಸದ್ಯ ಸಚಿವರಿಗೆ ಮಹಿಳೆ ಚಳಿ ಬಿಡಿಸಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನೆಟ್ಟಿಗರ ಫುಲ್ ಸಪೋರ್ಟ್

ಸದ್ಯ ಈ ವಿಡಿಯೋ ಘರ್ ಕೆ ಕಲೇಷ್ ಎಂಬ ಎಕ್ಸ್ (X) ಖಾತೆಯಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ಧೈರ್ಯಕ್ಕೆ ಭೇಷ್ ಎನ್ನುತ್ತಿದ್ದಾರೆ. ಭಾಷಣ ಮಾಡೋದು ಸುಲಭ, ಆದರೆ ಜನರ ಸಮಸ್ಯೆಗಳನ್ನು ಅರಿತುಕೊಳ್ಳುವುದು ಮುಖ್ಯ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular