HomeIndiaShocking Video | ವಿಶೇಷಚೇತನರ ಕೋಚ್ ಪ್ರವೇಶಿಸಿದ ಮಹಿಳೆ; ಪ್ರಶ್ನಿಸಿದ ಪ್ರಯಾಣಿಕರಿಗೆ ಚಪ್ಪಲಿಯಿಂದ ಹಲ್ಲೆ

Shocking Video | ವಿಶೇಷಚೇತನರ ಕೋಚ್ ಪ್ರವೇಶಿಸಿದ ಮಹಿಳೆ; ಪ್ರಶ್ನಿಸಿದ ಪ್ರಯಾಣಿಕರಿಗೆ ಚಪ್ಪಲಿಯಿಂದ ಹಲ್ಲೆ

ಮಹಾರಾಷ್ಟ್ರದ ವಿರಾರ್‌ನಿಂದ ದಾದರ್‌ಗೆ ಬರುತ್ತಿದ್ದ ಡಬಲ್-ಫಾಸ್ಟ್ ರೈಲಿನಲ್ಲಿ ವಿಶೇಷಚೇತನ ಪ್ರಯಾಣಿಕರಿಗಾಗಿ ಮೀಸಲಿಟ್ಟ ಕೋಚ್‌ ಪ್ರವೇಶಿಸಿದ ಮಹಿಳೆ ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ. ದಿವ್ಯಾಂಗರ ಕೋಚ್‌ನಲ್ಲಿದ್ದ ಆಕೆಯನ್ನು ಪ್ರಯಾಣಿಕರು ಪ್ರಶ್ನಿಸಿದಾಗ ಮಹಿಳೆ ಪ್ರಯಾಣಿಕರೊಂದಿಗೆ ವಾಗ್ವಾದಕ್ಕಿಳಿದು ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ.

ಪರಿಸ್ಥಿತಿಯಿಂದ ಹತಾಶರಾದ ವಿಶೇಷ ಸಾಮರ್ಥ್ಯವುಳ್ಳ ಪ್ರಯಾಣಿಕರು ವಸೈ ರೈಲ್ವೆ ಪೊಲೀಸರಿಗೆ ಕರೆ ಮಾಡಿ ಮಹಿಳೆಯನ್ನು ಅವರಿಗೆ ಒಪ್ಪಿಸಿದರು. ಇಡೀ ಘಟನೆಯನ್ನು ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋ ವೈರಲ್ ಆಗಿದ್ದು ಮಹಿಳೆಯ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular