HomeLatest Newsಮುಂಬೈನಲ್ಲಿ ಹೆಚ್ಚುತ್ತಿರುವ ಆತಂಕ : ಮುುಂಬೈನಲ್ಲಿ ವರ್ಷದಲ್ಲೇ 716 ಹದಿಹರೆಯದ ಬಾಲಕಿಯರಿಗೆ ಗರ್ಭಪಾತ: ವ್ಯವಸ್ಥೆಗೆ ಎಚ್ಚರಿಕೆ...

ಮುಂಬೈನಲ್ಲಿ ಹೆಚ್ಚುತ್ತಿರುವ ಆತಂಕ : ಮುುಂಬೈನಲ್ಲಿ ವರ್ಷದಲ್ಲೇ 716 ಹದಿಹರೆಯದ ಬಾಲಕಿಯರಿಗೆ ಗರ್ಭಪಾತ: ವ್ಯವಸ್ಥೆಗೆ ಎಚ್ಚರಿಕೆ ನೀಡಿದ ಆರ್‌ಟಿಐ ದತ್ತಾಂಶ

ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ನಾಗರಿಕ ಸಮಾಜ ಮತ್ತು ಆರೋಗ್ಯ ವಲಯದ ಕಣ್ಣು ಕೆಂಪಾಗಿಸುವಂತಹ ಆಘಾತಕಾರಿ ದತ್ತಾಂಶವೊಂದು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಬಹಿರಂಗವಾಗಿದೆ. ಮಹಾನಗರದಲ್ಲಿ ಅಪ್ರಾಪ್ತರು ಹಾಗೂ ಹದಿಹರೆಯದ ಹುಡುಗಿಯರಲ್ಲಿ ಗರ್ಭಪಾತದ (Abortion) ಪ್ರಕರಣಗಳು ಗಂಭೀರ ಮಟ್ಟದಲ್ಲಿ ಹೆಚ್ಚುತ್ತಿರುವುದು ಬೆಳಕಿಗೆ ಬಂದಿದ್ದು, ಇದು ಇಂದಿನ ಆಧುನಿಕ ಜೀವನಶೈಲಿ ಮತ್ತು ಲೈಂಗಿಕ ಶಿಕ್ಷಣದ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ.

ಪ್ರಸಿದ್ಧ ಆರ್‌ಟಿಐ ಕಾರ್ಯಕರ್ತ ಚೇತನ್ ಕೊಠಾರಿ ಅವರು ಮುಂಬೈನ ಗರ್ಭಪಾತ, ತಾಯಂದಿರ ಸಾವುಗಳ ಕುರಿತು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ (BMC) ಅರ್ಜಿ ಸಲ್ಲಿಸಿದ್ದರು. ಬಿಎಂಸಿಯ ಕುಟುಂಬ ಕಲ್ಯಾಣ ಘಟಕ ನೀಡಿರುವ ಅಧಿಕೃತ ಲಿಖಿತ ಅಂಕಿ-ಅಂಶಗಳು ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.

20,950 ಗರ್ಭಪಾತ: ಮುಂಚೂಣಿಯಲ್ಲಿದೆ ಗರ್ಭನಿರೋಧಕಗಳ ವೈಫಲ್ಯ

ಬಿಎಂಸಿ ನೀಡಿರುವ ದತ್ತಾಂಶಗಳ ಪ್ರಕಾರ, ಏಪ್ರಿಲ್ 2024 ರಿಂದ ಮಾರ್ಚ್ 2025 ರವರೆಗಿನ ಒಂದೇ ವರ್ಷದ ಅವಧಿಯಲ್ಲಿ ಮುಂಬೈನಲ್ಲಿ ಒಟ್ಟು 20,950 ವೈದ್ಯಕೀಯ ಗರ್ಭಧಾರಣೆಯ ಮುಕ್ತಾಯ (MTP) ಕಾರ್ಯವಿಧಾನಗಳು ನಡೆದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅತ್ಯಂತ ಶಾಕಿಂಗ್ ಅಂಶವೆಂದರೆ, ಈ ಒಟ್ಟು ಪ್ರಕರಣಗಳಲ್ಲಿ ಸಿಂಹಪಾಲು ಅಂದರೆ 19,495 ಪ್ರಕರಣಗಳಿಗೆ ಗರ್ಭನಿರೋಧಕಗಳ ವೈಫಲ್ಯ ಅಥವಾ ಅವುಗಳನ್ನು ಬಳಸುವಲ್ಲಿನ ತಪ್ಪು ಮತ್ತು ನಿರ್ಲಕ್ಷ್ಯವೇ ನೇರ ಕಾರಣ ಎಂದು ಸರ್ಕಾರಿ ದಾಖಲೆಗಳು ಉಲ್ಲೇಖಿಸಿವೆ

ವಯೋಮಾನ ದಾಖಲಾದ ಗರ್ಭಪಾತ ಪ್ರಕರಣಗಳು

25 – 29 ವರ್ಷ 7,296 (ಅತಿ ಹೆಚ್ಚು ಪ್ರಕರಣ)

30 – 34 ವರ್ಷ 5,673

20 – 24ವರ್ಷ 3,314

19 ವರ್ಷಕ್ಕಿಂತ ಕಡಿಮೆ (ಹದಿಹರೆಯದವರು)716 (ತೀವ್ರ ಕಳವಳಕಾರಿ)

ಹೆಣ್ಣುಮಕ್ಕಳ ಜೀವಕ್ಕೆ ಕಂಟಕವಾಗುತ್ತಿರುವ ಇತರ ಪ್ರಮುಖ ಕಾರಣಗಳು:
ಕೇವಲ ಅನ್-ವಾಂಟೆಡ್ ಪ್ರೆಗ್ನೆನ್ಸಿ ಮಾತ್ರವಲ್ಲದೆ, ಇನ್ನುಳಿದ ಗರ್ಭಪಾತದ ಕೇಸ್‌ಗಳ ಹಿಂದೆ ಹೆಣ್ಣುಮಕ್ಕಳ ಆರೋಗ್ಯ ಮತ್ತು ಸಾಮಾಜಿಕ ದುಸ್ಥಿತಿಯ ಕಥೆಗಳಿವೆ.

ಮಾನಸಿಕ ಆರೋಗ್ಯದ ಮೇಲಿನ ಪರಿಣಾಮ: 358 ಪ್ರಕರಣಗಳು

ದೈಹಿಕ ಆರೋಗ್ಯಕ್ಕೆ ತೊಂದರೆ: 288 ಪ್ರಕರಣಗಳು

ಗರ್ಭಿಣಿಯ ಜೀವಕ್ಕೆ ಅಪಾಯ: 271 ಪ್ರಕರಣಗಳು

ಭ್ರೂಣದ ಅಸಹಜತೆಗಳು (ಬೆಳವಣಿಗೆ ಕೊರತೆ): 246 ಪ್ರಕರಣಗಳು

ಅತ್ಯಾಚಾರದಂತಹ ಭೀಕರ ಪ್ರಕರಣಗಳು: 27 ಪ್ರಕರಣಗಳು

ಕೇವಲ ಗರ್ಭನಿರೋಧಕಗಳ ವೈಫಲ್ಯವನ್ನೇ ನಾವು ನೇರ ಕಾರಣ ಅನ್ನಲು ಬರಲ್ಲ. ಇಂದಿಗೂ ಅನೇಕ ಮಹಿಳೆಯರಿಗೆ ಸುರಕ್ಷಿತ ವಿಧಾನಗಳ ಸರಿಯಾದ ಬಳಕೆ ಗೊತ್ತಿಲ್ಲ. ಇನ್ನು ಕೆಲವು ಮಹಿಳೆಯರು ಸಾಮಾಜಿಕ ಕಳಂಕ ಮತ್ತು ಸಮಾಜದ ಭಯದಿಂದಾಗಿ ಕೌನ್ಸೆಲಿಂಗ್ ವೇಳೆ ನಿಜವಾದ ಸತ್ಯ ಮುಚ್ಚಿಟ್ಟು, ವೈದ್ಯರ ಮುಂದೆ ಸುಳ್ಳು ಕಾರಣಗಳನ್ನು ದಾಖಲಿಸಿರಬಹುದು. ಎಂದು ಬಿಎಂಸಿ ಆರೋಗ್ಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನ ಬಹುತೇಕ ವಾರ್ಡ್‌ಗಳ ಪೈಕಿ ಕೆ-ವೆಸ್ಟ್ (K-West) ವಾರ್ಡ್‌ನಲ್ಲಿಯೇ ಅತಿ ಹೆಚ್ಚು ಅಂದರೆ 3,248 ಗರ್ಭಪಾತದ ಪ್ರಕರಣಗಳು ವರದಿಯಾಗಿವೆ. ಇನ್ನು ಧರ್ಮ ಆಧಾರಿತವಾಗಿ ನೋಡುವುದಾದರೆ ಹಿಂದೂ ಮಹಿಳೆಯರಲ್ಲಿ 15,765, ಮುಸ್ಲಿಂ ಮಹಿಳೆಯರಲ್ಲಿ 3,442, ಕ್ರಿಶ್ಚಿಯನ್ ಮಹಿಳೆಯರಲ್ಲಿ 649 ಮತ್ತು ಸಿಖ್ ಮಹಿಳೆಯರಲ್ಲಿ 354 ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಇದೇ ಅವಧಿಯಲ್ಲಿ 4,226 ಸ್ವಾಭಾವಿಕ ಗರ್ಭಪಾತಗಳು (Miscarriages) ಕೂಡ ಸಂಭವಿಸಿವೆ.

ಹಿಂದಿನ ವರ್ಷಗಳಿಗೆ (2017-18ರಲ್ಲಿ 35,358 ಪ್ರಕರಣಗಳು, 19 ಸಾವು) ಹೋಲಿಸಿದರೆ ಒಟ್ಟು ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆಯಾದರೂ, ಅಪ್ರಾಪ್ತ ಹೆಣ್ಣುಮಕ್ಕಳು ಗರ್ಭಪಾತದ ದವಡೆಗೆ ಸಿಲುಕುತ್ತಿರುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರ ಭವಿಷ್ಯಕ್ಕೆ ದೊಡ್ಡ ಕಂಟಕವಾಗಿದೆ. ತಾಯಂದಿರ ರಕ್ತಹೀನತೆ, ಅಪೌಷ್ಟಿಕತೆ ಮತ್ತು ಸುರಕ್ಷಿತವಲ್ಲದ ವಿಧಾನಗಳಿಂದ ಹೊಟ್ಟೆ ಒಡೆಯುವ ಪರಿಸ್ಥಿತಿ ತಾಯಂದಿರ ಸಾವಿಗೆ ದಾರಿಯಾಗುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular