HomeCrimeಸಂಬಂಧ ಕಡಿತಗೊಳಿಸಿಕೊಂಡಿದ್ದಕ್ಕೆ ಮಾಜಿ ಪ್ರೇಯಸಿ ಸ್ಕೂಟಿ - ಫೋನ್ ಎಗರಿಸಿದ ಭೂಪ....!

ಸಂಬಂಧ ಕಡಿತಗೊಳಿಸಿಕೊಂಡಿದ್ದಕ್ಕೆ ಮಾಜಿ ಪ್ರೇಯಸಿ ಸ್ಕೂಟಿ – ಫೋನ್ ಎಗರಿಸಿದ ಭೂಪ….!

ತನ್ನೊಂದಿಗೆ ಯುವತಿ ಸಂಬಂಧ ಕಳೆದುಕೊಂಡಳೆಂಬ ಕಾರಣಕ್ಕೆ 24 ವರ್ಷದ ಯುವಕನೊಬ್ಬ ಆಕೆಯ ಸ್ಕೂಟಿ, ಮೊಬೈಲ್ ಕಸಿದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಈ ಸಂಬಂಧ ಇದೀಗ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಮುಂಬೈನ 20 ವರ್ಷದ ಯುವತಿ ಮೊಹ್ಸಿನ್ ಖಾನ್ ಎಂಬಾತನೊಂದಿಗೆ ಪ್ರೀತಿಯಲ್ಲಿದ್ದು ಆದರೆ ಶ್ರದ್ಧಾ ವಾಲ್ಕರ್ ಳನ್ನು ಆಕೆಯ ಪ್ರಿಯಕರ ಅಫ್ತಾಬ್ ಪೂನಾವಾಲ ಹತ್ಯೆಗೈದ ಘಟನೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಸಂಬಂಧ ಕಡಿದುಕೊಂಡಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟಾದರೂ ಸಹ ಮೊಹ್ಸಿನ್, ಯುವತಿ ಹಿಂದೆ ಬಿದ್ದಿದ್ದು, ತನ್ನೊಂದಿಗೆ ಮೊದಲಿನಂತೆ ಸಂಬಂಧ ಮುಂದುವರಿಸಲು ಪದೇ ಪದೇ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಯುವತಿ ನಿರಾಕರಿಸಿದ ವೇಳೆ ಆಕೆ ತನ್ನ ಕಚೇರಿಗೆ ಹೋಗುವಾಗ ಅಡ್ಡಗಟ್ಟಿ ಸ್ಕೂಟಿ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಇದೀಗ ಯುವತಿ ಹಾಗೂ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular