HomeIndiaMumbai: ಅತಿ ವೇಗವಾಗಿ ಬಂದ ಬೈಕ್ ಡಿಕ್ಕಿ; 3 ಹಲ್ಲು ಕಳೆದುಕೊಂಡ ಪೊಲೀಸ್ ಪೇದೆ

Mumbai: ಅತಿ ವೇಗವಾಗಿ ಬಂದ ಬೈಕ್ ಡಿಕ್ಕಿ; 3 ಹಲ್ಲು ಕಳೆದುಕೊಂಡ ಪೊಲೀಸ್ ಪೇದೆ

ಅತಿ ವೇಗವಾಗಿ ಬಂದ ಬೈಕು ಒಂದು ಕರ್ತವ್ಯ ನಿರತ ಪೊಲೀಸ್ ಪೇದೆಗೆ ಡಿಕ್ಕಿ ಹೊಡೆದ ಪರಿಣಾಮ ವಸಡಿಗೆ ತೀವ್ರ ಗಾಯವಾಗಿದ್ದು, ಮುಂದಿನ ಮೂರು ಹಲ್ಲುಗಳನ್ನು ಸರ್ಜರಿ ಮೂಲಕ ಹೊರ ತೆಗೆಯಲಾಗಿದೆ. ಅಲ್ಲದೆ ಕೆಳ ತುಟಿಗೆ ಹೊಲಿಗೆ ಹಾಕಲಾಗಿದೆ.

ಇಂತಹದೊಂದು ಘಟನೆ ಮುಂಬೈನ ಬೊರಿವಿಲಿಯ ಪಶ್ಚಿಮ ಎಕ್ಸ್ ಪ್ರೆಸ್ ಹೈವೇನಲ್ಲಿ ನಡೆದಿದ್ದು, ಕಸ್ತೂರ್ ಬಾ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 40 ವರ್ಷದ ಅಮೋಲ್ ಅನಂತ್ ಯಾದ್ರೆ ಗಾಯಗೊಂಡವರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವರನ್ನು ಶನಿವಾರದಂದು ಹೈವೇನಲ್ಲಿ ವಿವಿಐಪಿ ಬಂದೋಬಸ್ತ್ ಗಾಗಿ ನಿಯೋಜನೆ ಮಾಡಲಾಗಿದ್ದು, ರಾತ್ರಿ 8:30 ರ ಸುಮಾರಿಗೆ ರಸ್ತೆ ದಾಟುತ್ತಿದ್ದ ವೇಳೆ ಮನೀಶ್ ರೋಹಿದಾಸ್ ಎಂಬಾತ ಅತಿ ವೇಗವಾಗಿ ಬಂದು ಬೈಕ್ ಡಿಕ್ಕಿ ಹೊಡೆಸಿದ್ದಾನೆ.

ಇದರ ಪರಿಣಾಮ ಪೊಲೀಸ್ ಪೇದೆ ಅಮೋಲ್ ಅನಂತ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ಮನಿಷ್ ಕೂಡ ಗಾಯಗೊಂಡಿದ್ದು, ಆತನ ವಿರುದ್ಧ ಪೊಲೀಸರು ನಿರ್ಲಕ್ಷದ ಚಾಲನೆ ಸೇರಿದಂತೆ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular