ಮುಂಬೈನಲ್ಲಿ ನಡೆದ ಪ್ರಮುಖ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ತಮ್ಮ ವಿಭಿನ್ನ ಹಾಗೂ ದುಬಾರಿ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಖ್ಯಾತ ಡಿಸೈನರ್ ರಾಹುಲ್ ಮಿಶ್ರಾ ಅವರ ‘ದೇವಿ’ ಕಾಟೂರ್ ಕಲೆಕ್ಷನ್‌ನ ಕಂಚಿನ ಬಣ್ಣದ ಗೌನ್ ಧರಿಸಿ ವೇದಿಕೆ ಏರಿದ ಅನನ್ಯಾ, ತಮ್ಮ ಗ್ಲಾಮರಸ್ ಶೈಲಿಯಿಂದ ಫ್ಯಾಷನ್ ಪ್ರಿಯರನ್ನು ಬೆರಗುಗೊಳಿಸಿದ್ದಾರೆ.
ದೇಹದ ಸೌಂದರ್ಯವನ್ನು ಹೆಚ್ಚಿಸುವಂತೆ ವಿನ್ಯಾಸಗೊಳಿಸಲಾದ ಈ ಡ್ರೆಸ್‌ನಲ್ಲಿ ಡೀಪ್ ನೆಕ್‌ಲೈನ್ ಹಾಗೂ ಸೊಂಟದ ಭಾಗದಲ್ಲಿ ನೀಡಲಾದ ವಿಶೇಷವಾದ ಫ್ರಿಲ್ಸ್ ಡಿಸೈನ್ ಆಕರ್ಷಕವಾಗಿ ಮೂಡಿಬಂದಿತ್ತು. ಕತ್ತಿನಿಂದ ಪಾದದವರೆಗೆ ಹರಿಯುವಂತೆ ಕಾಣುವ ಪ್ಲೀಟೆಡ್ ಶೈಲಿಯು ಅನನ್ಯಾ ಅವರ ಎತ್ತರ ಹಾಗೂ ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡಿತ್ತು. ಬ್ರಾಂಜ್ ಮೆಟಾಲಿಕ್ ಮೆರುಗಿನ ಈ ಗೌನ್‌ಗೆ ಸೂಕ್ತವಾಗುವಂತೆ ಬ್ರೌನ್ ನ್ಯೂಡ್ ಲಿಪ್‌ಸ್ಟಿಕ್, ವಾರ್ಮ್ ಮೇಕಪ್ ಹಾಗೂ ಗುಂಗುರು ಕೂದಲಿನ ವಿನ್ಯಾಸದೊಂದಿಗೆ ನಟಿ ಕಂಗೊಳಿಸಿದರು.
ಈ ಉಡುಪಿನ ಜೊತೆಗೆ ಅನನ್ಯಾ ಧರಿಸಿದ್ದ ಪಿಯಾಜೆ ಕಂಪನಿಯ ‘ಲೈಮ್‌ಲೈಟ್ ಗಾಲಾ ಪ್ರೆಶಿಯಸ್ ರೇನ್‌ಬೋ’ ವಾಚ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. 18 ಕ್ಯಾರಟ್ ರೋಸ್ ಗೋಲ್ಡ್‌ನಿಂದ ತಯಾರಾದ ಈ ವಾಚ್‌ನ ಬೆಲೆ ಬಿಸಿನೆಸ್ ವಲಯದ ಪ್ರಕಾರ ಸುಮಾರು 16 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಅವರು ಸುಮಾರು 1.4 ಲಕ್ಷ ರೂಪಾಯಿ ಮೌಲ್ಯದ ರೆನೆ ಕಾವೊವಿಲ್ಲಾ ಕಂಪನಿಯ ಸ್ಯಾಂಡಲ್ ಧರಿಸುವ ಮೂಲಕ ಅತ್ಯಂತ ದುಬಾರಿ ಹಾಗೂ ಅದ್ಧೂರಿ ಲುಕ್‌ನಲ್ಲಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

