Mumbai: ಜನವಸತಿ ಪ್ರದೇಶದಲ್ಲಿಯೇ ಡ್ರಗ್ಸ್ ಸೇವನೆ; ಫೋಟೋ – ವಿಡಿಯೋ ಪೊಲೀಸರಿಗೆ ಟ್ಯಾಗ್

ಮುಂಬೈ ಮಹಾನಗರದಲ್ಲಿ ಡ್ರಗ್ಸ್ ದಂಧೆ ಸಾಮಾನ್ಯವಾಗಿದೆ. ಈ ಬಗ್ಗೆ ನಾಗರಿಕರು ಸಾರ್ವಜನಿಕ ವೇದಿಕೆಯಲ್ಲಿ ಧ್ವನಿಯೆತ್ತಿದ್ದಾರೆ.

ಇತ್ತೀಚೆಗೆ, ಬೋರಿವಲಿ ವೆಸ್ಟ್ ನ ಎಂಎಚ್‌ಬಿ ಕಾಲೋನಿ ಪೊಲೀಸ್ ಠಾಣೆ ಬಳಿಯ ವಸತಿ ಕಾಲೋನಿಯಲ್ಲಿ ಹುಡುಗರ ಗುಂಪೊಂದು ಮದ್ಯ, ಮಾದಕ ದ್ರವ್ಯ ಸೇವನೆ ಮಾಡುತ್ತಿರುವುದು ಕಂಡುಬಂದಿದೆ.

ಘಟನೆಯನ್ನು ಮುಂಬೈ ಆವಾಜ್ ಹ್ಯಾಂಡಲ್ ಟ್ವಿಟರ್‌ನಲ್ಲಿ ವರದಿ ಮಾಡಲಾಗಿದ್ದು, ಕ್ರಮಕ್ಕಾಗಿ ಒತ್ತಾಯಿಸಲಾಗಿದೆ. ಈ ಯುವಕರ ಗುಂಪು ಜೈರಾಜ್ ನಗರ ಮತ್ತು ಅಶೋಕ್ ನಗರದ ಮೂಲೆಯಲ್ಲಿರುವ ಸ್ಥಳದಲ್ಲಿ ಭೇಟಿಯಾಗಿ ಡ್ರಗ್ಸ್ ಸೇವಿಸುತ್ತದೆ ಎಂದು ಹೇಳಲಾಗಿದೆ.

ಘಟನೆಯ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು, ಎಂಎಚ್‌ಬಿ ಕಾಲೋನಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.

ಈ ಹಿಂದೆ ಮಾರ್ಚ್ 16 ರಂದು ಪಾಯಲ್ ಶಾ ಎಂಬ ಟ್ವಿಟ್ಟರ್ ಬಳಕೆದಾರರು ಆಂಟಾಪ್ ಹಿಲ್ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಡ್ರಗ್ಸ್ ಮಾರಾಟ ಮತ್ತು ಮದ್ಯ ಬಳಕೆ ವಿಪರೀತವಾಗಿದೆ ಎಂದು ಫೋಟೋ ಸಮೇತ ಟ್ವೀಟ್ ಮಾಡಿದ್ದರು.

https://twitter.com/AawazMumbai/status/1636940657137950720?ref_src=twsrc%5Etfw%7Ctwcamp%5Etweetembed%7Ctwterm%5E1636940657137950720%7Ctwgr%5E9a7fec01b9736d690220b348cac03a259b74181a%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fmumbai-gang-consumes-drugs-alcohol-post-midnight-near-mhb-colony-police-station-in-borivali-visuals-surface

https://twitter.com/Payal18Shah/status/1635930158178926593?ref_src=twsrc%5Etfw%7Ctwcamp%5Etweetembed%7Ctwterm%5E1635930158178926593%7Ctwgr%5E9a7fec01b9736d690220b348cac03a259b74181a%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fmumbai-gang-consumes-drugs-alcohol-post-midnight-near-mhb-colony-police-station-in-borivali-visuals-surface

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read